Officials' focus on helping investors...
ಹುಳಿಯಾರು: ರೈತ ಹೋರಾಟದ ಕಿಚ್ಚಿನೊಂದಿಗೆ, ಮಹಿಳಾ ಸಬಲೀಕರಣದ ಕನಸನ್ನು ನನಸು ಮಾಡುತ್ತಿರುವ ಅಪರೂಪದ ಸಾಧಕಿ ಹುಳಿಯಾರು ಹೋಬಳಿಯ ಕೆಂಕೆರೆಯ ಚಂದ್ರಕಲಾ ಸತೀಶ್ ಅವರಿಗೆ ತಾಲೂಕಿನ ಸೃಜನ ಮಹಿಳಾ ಸಂಘಟನೆಯಿಂದ ಸಂಘಟನೆಯ ಅಧ್ಯಕ್ಷೆ ಎನ್.ಇಂದಿರಮ್ಮ ಅವರ ನಿವಾಸದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಹಂಬಲ ಹೊಂದಿರುವ ಚಂದ್ರಕಲಾ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ದಾರಿ ತೋರಿಸಿಕೊಟ್ಟಿದ್ದಾರೆ. ರೊಟ್ಟಿ ತಯಾರಿಕೆ, ಹಪ್ಪಳ, ಉಪ್ಪಿನಕಾಯಿ ತಯಾರಿಕೆ. ಟೈಲರಿಂಗ್, ಕಸೂತಿ ಕಲೆ ಹಾಗೂ ವಿಶಿಷ್ಟವಾದ 'ಕರಡಿಗೆ ಕವಚ' ತಯಾರಿಕೆಯಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ದುಡಿಮೆಯ ಹಾದಿ ತೋರಿಸಿದ್ದಾರೆ. ಜತೆಗೆ ಅಶಕ್ತ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿವಾಹ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಈ ಗೌರವ ಸಮರ್ಪಿಸಲಾಯಿತು.
ಸಂಟನೆಯ ಹಿರಿಯ ಸದಸ್ಯರಾದ ಅನ್ನಪೂರ್ಣಮ್ಮ, ಉಮಾದೇವಿ, ರಾಮಕೃಷ್ಣಪ್ಪ, ಮಮತಾ, ಕರವೇ ಅಧ್ಯಕ್ಷೆ ಮಾಲಾ, ಮಂಜುಳಾ ಇದ್ದರು.