ಕಲಬುರಗಿ ಬಸವ ಪ್ರಕಾಶನದ ಬಸವ ಸಿರಿ ಪ್ರಶಸ್ತಿಗೆ ಆಯ್ಕೆಯಾದ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳಿಗೆ ಬಸವರಾಜ ಕೊನೆಕ್​ ಅವರು ಆಹ್ವಾನ ನೀಡಿ ಪ್ರಶಸ್ತಿ ಸ್ವೀಕರಿಸಲು ಆಗಮಿಸುವಂತೆ ಕೋರಿ ಸೋಮವಾರ ಆಹ್ವಾನ ನೀಡಿದರು. ಪ್ರೊ.ಶಿವರಾಜ ಪಾಟೀಲ್​, ಡಾ.ಗವಿಸಿದ್ದಪ್ಪ ಪಾಟೀಲ್​, ಶರಣಬಸಪ್ಪ ವಡ್ಡನಕೇರಿ ಇದ್ದರು. 
ರಾಜ್ಯ

ಹುಲಸೂರು ಶ್ರೀಗಳಿಗೆ ಅಧಿಕೃತ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • ಮೇ 1ರಂದು ಬಸವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ: ಬಸವ ಪ್ರಕಾಶನ ವತಿಯಿಂದ ಲಿಂ.ಬಸಮ್ಮ ಬಿ.ಕೊನೇಕ ಪುಣ್ಯ ಸ್ಮರಣೋತ್ಸವ ನಿಮಿತ್ತ ನೀಡುವ 2026ನೇ ಸಾಲಿನ ರಾಜ್ಯ ಮಟ್ಟದ ಬಸವ ಸಿರಿ ಪ್ರಶಸ್ತಿಗೆ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಆಯ್ಕೆಯಾಗಿದ್ದಾರೆ.
ಬಸವತತ್ವ ಪ್ರಚಾರದೊಂದಿಗೆ ಬಸವ ತತ್ವ ಅನುಯಾಯಿಯಾಗಿ ದೇಶ ವ್ಯಾಪಿ ಬಸವ ಪ್ರಸಾರ ಮಾಡಿದವರು. ಬೀದರ್​ ಜಿಲ್ಲೆಯ ಪ್ರಥಮ ಆಧುನಿಕ ವಚನಕಾರರು. ಕವಿಗಳು ಸಾಹಿತ್ಯ ಮತ್ತು ಬಸವ ತತ್ವ ಸೇವೆಗೆ ಈ ಪ್ರಶಸ್ತಿ ಸಂದಿದೆ. ಹನ್ನೊಂದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಪ್ರದಾನ ಮಾಡಲಾಗುವುದು. ಮೇ 1ರಂದು ಬೆಳಗ್ಗೆ 10ಕ್ಕೆ ನಗರದ ಸೂಪರ್​ ಮಾರ್ಕೆಟನಲ್ಲಿರುವ ಕೆಕೆಸಿಸಿಐ ಸಭಾಟಗಣದಲ್ಲಿ ಹಮ್ಮಿಕೊಂಡ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಶ್ರೀಗಳಿಗೆ ಆಹ್ವಾನ ನೀಡಲಾಗಿದೆ ಎಂದು ಬಸವರಾಜ ಕೊನೇಕ ತಿಳಿಸಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಅವರು, ಡಾ.ಸಿ.ಆರ್​.ಚಂದ್ರಶೇಖರ ಅವರ ನಾಲ್ಕು ಹಾಗೂ ಡಾ.ಶರಣಬಸಪ್ಪ ವಡ್ಡನಕೇರಿ ಸಂಪಾದಿತ ಕಾಯಕ ಶರಣರು ಸೇರಿ ಐದು ಕೃತಿಗಳ ಲೋಕಾರ್ಪಣೆ ಮಾಡಿ ಪ್ರಶಸ್ತಿ ಪ್ರದಾನ ಮಡುವರು. ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಕೃತಿ ಪರಿಚಯ ಮಾಡುವರು. ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್​ ಮುಖ್ಯ ಅತಿಥಿಯಾಗಿದ್ದಾರೆ. ಪ್ರಕಾಶಕ ಡಾ.ಬಸವರಾಜ ಕೊನೇಕ್​ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರಾಂಕ್​ ಪಡೆದ ಗಣೇಶ ಸಹದೇವ ಬೋಸ್ಲೆ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರಾಂಕ್​ ಪಡೆದ ಸೃಷ್ಟಿ ಪಾಟೀಲ ಅವರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.