ಯಾದಗಿರಿಯಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಶಾಸಕರಾದ ಶರಣಬಸಪ್ಪ ದರ್ಶನಾಪುರ, ಶರಣಗೌಡ ಕಂದಕೂರ, ಚನ್ನಾರಡ್ಡಿ ಪಾಟೀಲ್, ರಾಜಾ ವೇಣು ಗೋಪಾಲ ನಾಯಕ, ಡಿಸಿ ರಾಹುಲ್ ಪಾಂಡ್ವೆ ಇತರರಿದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚನೆ
- ಯಾದಗಿರಿಯಲ್ಲಿ ಬರ ಪರಿಶೀಲನಾ ಸಭೆ
ಬರ ನಿರ್ವಹಣೆ ಮತ್ತು ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳ ಪರಿಹಾರಕ್ಕಾಗಿ ಜಿ¯್ಲÁ, ತಾಲೂಕು ಮತ್ತು ಗ್ರಾಪಂಗಳ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕು ಎಂದು ಸಂಬAಧಪಟ್ಟ ಅಽಕಾರಿಗಳಿಗೆ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲï ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿ¯್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕುರಿತು ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಅಽಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿ¯್ಲÉಯಲ್ಲಿ ಮಳೆ ಇಲ್ಲದೆ ಒಣಗಿದ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದ ಅವರು, ಈ ಕುರಿತ ಸಮಗ್ರ ವರದಿ ಸಿದ್ದಪಡಿಸಿ ಕಂದಾಯ ಇಲಾಖೆಗೆ ಸಲ್ಲಿಸುವಂತೆ ಡಿಸಿ ಅವರಿಗೆ ಸಚಿವರು ಸೂಚಿಸಿದರು.
ಕುಡಿಯುವ ನೀರಿನ ನಿರ್ವಹಣೆಗೆ ಜಿ¯್ಲÁ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ತಲಾ ಒಬ್ಬರಂತೆಯೆ ನೋಡಲ್ ಅಽಕಾರಿಗಳನ್ನು ನೇಮಿಸಬೇಕು. ಜಿ¯್ಲÉಯ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಪಿಡಿಒಗಳಿದ್ದು ಕೆಲಸ ಮಾಡಬೇಕು. ಜನರಿಗೆ ಕೈಗೆ ಸಿಗುವುದಿಲ್ಲ ಎಂಬ ಶಾಸಕ ಶರಣಗೌಡ ಕಂದಕೂರ ಅವರ ಆರೋಪಕ್ಕೆ ಸ್ಪಂದಿಸಿದ ಸಚಿವರು, ಬೆಳಗ್ಗೆಯಿಂದ ಸಂಜೆಯವರೆಗೆ ನಾಲ್ಕು ಸಲ ಹಾಜರಿ ಹಾಕುವ ಸಿಸ್ಟಮï ಜಾರಿ ಮಾಡಿ ಎಂದು ಜಿಪಂ ಸಿಇಒ ಅವರಿಗೆ ತಾಕೀತು ಮಾಡಿದರು.
ನಗರ ಮತ್ತು ಎಲ್ಲ ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಈ ನಿಟ್ಟಿನಲ್ಲಿ ಜಿ¯್ಲÉಯ ಎಲ್ಲ ತಹಸೀಲ್ದಾರರು, ತಾಪಂ ಇಒ ಅವರು ನಿಗಾ ವಹಿಸಿ ಕೆಲಸ ಮಾಡಬೇಕು. ಜೆಜೆಎಂ ಕೆಲಸ ತ್ವರಿತಗತಿ ಮುಗಿಸಿದರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟ ಅಽಕಾರಿಗಳು ಕ್ರಮ ತೆಗೆದಕೊಳ್ಳಬೇಕೆಂದು ಹೇಳಿದರು. ಡಿಸಿ ರಾಹುಲï ತುಕಾರಾಂ ಪಾಂಡ್ವೆ, ಜಿಪಂ ಸಿಇಒ ಲವೀಶ್ ಒರ್ಡಿಯಾ ಅವರು ಜಿ¯್ಲÉಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲï ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ ಸೇರಿ ವಿವಿಧ ಇಲಾಖೆ ಅಽಕಾರಿಗಳಿದ್ದರು.
೨೪ಗಂಟೆಗಳಲ್ಲಿ ಕೆಲಸ ಮುಗಿಸಿ
ವಿದ್ಯುತ್ ಕೊರತೆ, ಟಿಸಿ ಅವಳಡಿಕೆ, ದುರಸ್ತಿ ಬಗ್ಗೆ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲï, ಶರಣಗೌಡ ಕಂದಕೂರ ಮತ್ತು ರಾಜÁ ವೇಣುಗೋಪಾಲ ನಾಯಕ ಜೆಸ್ಕಾಂ ಇಲಾಖೆ ವಿರುದ್ಧ ಆರೋಪಗಳ ಸುರಿಮಳೆಗೈದಾಗ ಗರಂ ಆದಂತೆಯೇ ಕಂಡು ಬಂದ ಸಚಿವರು ಜೆಸ್ಕಾಂನ ಅಽಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಶಾಸಕರ ಸೂಚನೆಯಂತೆ ೨೪ ಗಂಟೆಗಳಲ್ಲಿ ಎಲ್ಲವೂ ಸರಿಪಡಿಸಬೇಕು ಎಂದು ಕಡಕ್ ಸೂಚನೆ ನೀಡಿದರು. ಶಾಸಕ ದರ್ಶನಾಪುರ ಜೆಸ್ಕಾಂ ಅಽಕಾರಿಗಳ ಕಾರ್ಯವೈಖರಿಯನ್ನು ಎಳೆ, ಎಳೆಯಾಗಿ ಬಿಡಿಸಿ ಹೇಳಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ಕೋಟಿ ರೂ.ಅನುದಾನ
ಕುಡಿಯುವ ನೀರಿನ ಬವಣೆ ನೀಗಿಸಲು ಸಿಎಂ ಅವರು ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ.ಅನುದಾನ ನೀಡಿದ್ದು, ಅಗತ್ಯವಿರುವ ಕಡೆ ಕೊಳವೆಬಾವಿ, ಆರ್‌ಒ ಪ್ಲಾಂಟ್ ಸೇರಿ ಏನು ಎಂಬ ಬಗ್ಗೆ ಅಂದಾಜು ವೆಚ್ಚ ತಯಾರಿಸಿ ಜಿಪಂ ಸಿಇಒ ಅವರಿಗೆ ನೀಡುವ ಮೂಲಕ ಕಾರ್ಯಗತ ಮಾಡಿಕೊಳ್ಳಬೇಕೆಂದು ಶಾಸಕರಿಗೆ ಸಚಿವರು ಸಲಹೆ ನೀಡಿದರು.ಹೀಗೆ ವಿವಿಧ ಇಲಾಖೆಗಳ ಅಽಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಜನಪರ ಕೆಲಸ ಮಾಡುವ ಸರ್ಕಾರಕ್ಕೆ ಅಽಕಾರಿಗಳು ಸ್ಪಂಽಸಿ ಕೆಲಸ ಮಾಡುವಂತೆ ಹೇಳಿದರು.
ಹೊಲಗಳಿಗೆ ಭೇಟಿ
ಸಭೆ ನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲï ಅವರು ಮುಂಡರಗಿ, ಸೈದಾಪುರ ಕ್ರಾಸ್, ಬಳಿಚಕ್ರ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ಶರಣಗೌಡ ಕಂದಕೂರ, ಡಿಸಿ ರಾಹುಲï ತುಕಾರಾಂ ಪಾಂಡ್ವೆ, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಸೇರಿ ಇತರರಿದ್ದರು. ಈ ವೇಳೆ ಜಿ¯್ಲÉಯಲ್ಲಿ ಬೆಳೆ ಹಾನಿಯಾದ ಬಗ್ಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ವಿರುದ್ದ ಶಾಸಕ ಕಂದಕೂರ ಗರಂ
ಗುರುಮಠಕಲ್ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ಹಿರಿ, ಕಿರಿ ಅಽಕಾರಿಗಳು ಸಕಾಲಕ್ಕೆ ಸ್ಪಂಽಸುತ್ತಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ಆರೋಪಿಸಿದರು. ಜಿಪಂ ಸಿಇಒ ವಿರುದ್ಧ ನೇರ ಆರೋಪ ಮಾಡಿದ ಶಾಸಕ ಕಂದಕೂರ, ೭ ಸಲ ಪೋನ್ ಮಾಡಿದರೂ ಎತ್ತಿ ಮಾತಾಡುವಷ್ಟು ಸೌಜನ್ಯ ಇಲ್ಲ, ಇಂತಹ ಅಽಕಾರಿಗಳಿಂದ ಅಭಿವೃದ್ಧಿ ಹೇಗೆ ನಿರೀಕ್ಷೆ ಮಾಡಲು ಸಾಧ್ಯ? ಗ್ರಾಪಂ ಪಿಡಿಒಗಳು ಕೇಂದ್ರ ಸ್ಥಾನಗಳಲ್ಲಿ ಇರುವುದೇ ಇಲ್ಲ, ಜನರು ಪ್ರತಿಯೊಂದು ತಮಗೆ ಪೋನ್ ಮಾಡುತ್ತಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಹೀಗೆ ಏರಿದ ಧ್ವನಿಯಲ್ಲಿ ಮಾತನಾಡಿದನ್ನು ಕಂಡು ಅರೆಕ್ಷಣ ದಂಗಾದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರೇ ಹೀಗೆ ಅಽಕಾರಿಗಳನ್ನು ದಬಾಯಿಸಬಾರದು, ಅಂತಹ ವೇದಿಕೆಯೂ ಇದು ಅಲ್ಲ. ಏನೇ ಇದ್ದರೂ ಸಮಾಧಾನದಿಂದ ಹೇಳಿ ಕೇಳಿ ಮಾಡಬೇಕು ಎಂದು ಶಾಂತಗೊಳಿಸಲು ಮುಂದಾದರು. ಕೋಪ ಕಡಿಮೆ ಮಾಡಿಕೊಳ್ಳದ ಶಾಸಕ ಕಂದಕೂರ ಅಽಕಾರಿಗಳ ನಿರ್ಲಕ್ಷ್ಯವನ್ನು ಎಳೆ, ಎಳೆಯಾಗಿ ಬಿಡಿಸಿದರು. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಶಾಸಕ ದರ್ಶನಾಪುರ ವಾತವರಣ ತಿಳಿಗೊಳಿಸಿದರು.