ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಪ್ರಯುಕ್ತ ಸೀತಾ ಕಾಲನಿಯಲ್ಲಿ ಬುಧವಾರ ಕಾರ್ಯಾಲಯ ಉದ್ಘಾಟಿಸಲಾಯಿತು. ಶ್ರೀ ರಾಜೇಶ್ವರ ಶಿವಾಚಾರ್ಯ, ಮುಚಳಂಬನ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ರಾಜೇಶ್ವರದ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಲೋಕೇಶ ಮಹಾರಾಜರು, ಶ್ರೀ ಹೊನ್ನಲಿಂಗ ಮಹಾಸ್ವಾಮೀಜಿ ಇತರರಿದ್ದರು.
- ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ
ಬಸವಕಲ್ಯಾಣ: ಕನ್ಹೇರಿ ಶ್ರೀಗಳ ಸಾನ್ನಿಧ್ಯದಲ್ಲಿ ನಗರದಲ್ಲಿ ಜೂನ್ 28 ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶವು ಸಂಸ್ಕಾರ ಮತ್ತು ಸಂಸತಿ ಉಳಿಸುವ ಕಾರ್ಯಕ್ರಮವಾಗಿದ್ದು, ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಸಮಾವೇಶದ ಹಿನ್ನೆಲೆಯಲ್ಲಿ ನಗರದ ಸೀತಾ ಕಾಲನಿಯಲ್ಲಿ ಬುಧವಾರ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾವೇಶವೂ ಎಲ್ಲರನ್ನು ಕೂಡಿಸುವ ಕಾರ್ಯಕ್ರಮವಾಗಿದೆ. ಎಲ್ಲ ಮಠಾಧೀಶರುನ್ನು ಸ್ವತ@ ತಾವೇ ಹೋಗಿ ಆಹ್ವಾನಿಸುವುದಾಗಿ ತಿಳಿಸಿದರು.
ಮುಚಳಂಬದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ರಾಜೇಶ್ವರದ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯ, ಸಂಸ್ಥಾನ ಗವಿಮಠದ ಶ್ರೀ ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಲೋಕೇಶ ಮಹಾರಾಜರು ಹಾಗೂ ಸಿಂಧನಕೇರಾದ ಶ್ರೀ ಹೊನ್ನಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಗುಂಡುರೆಡ್ಡಿ ಕಮಲಾಪುರೆ, ಡಾ.ಜಿಎಸ್ ಭುರಳೆ, ಡಾ.ವಿ.ಎಸ್.ಮಠಪತಿ, ಡಾ.ಬಸವರಾಜಸ್ವಾಮಿ, ಡಾ. ಧನರಾಜ ಚೆಂದನಕೇರ, ಗುರುನಾಥ್ ವಡ್ಡೆ, ಸಿದ್ರಾಮ ಗುದಗೆ, ದೀಪಕ ಗಾಯಕವಾಡ, ರವಿ ನವದ್ಗೆಕರ್, ದತ್ತು ಬೆಂಡೆ, ಸಂದೀಪ ಪಾಟೀಲ್, ಶಿವಕುಮಾರ ದಾಬಕೆ, ಶ್ರೀಕಾಂತ ಕಾಂಬಳೆ, ಯುವರಾಜ ಜಾಧವ್, ಸಂಗಮೇಶ ಬೆಲ್ಲೆ, ಸತೀಶ ಮೆಟಗೆ, ಅಮರ್ ಬಡದಾಳೆ, ರಾಮ್ ಜಾಧವ್, ಲೋಕೇಶ್ ಮೋಳಕೆರೆ, ನವನಾಥ್ ಮೇತ್ರೆ, ವೀರೇಶ್ ಗುಡ್ಡಾ, ಸುನೀಲ್ ಪರೆಪ್ಪಾ, ಪವನಕುಮಾರ ದಾಬಕೆ, ಪ್ರಭು ಕಾಡದೆ, ಅಶೋಕ ಕಾಂಬಳೆವಾಡಿ, ನೀಲಕಂಠ ತುಗಾವೆ ಇದ್ದರು.