ಮಹಾರಂಗ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಕುಮಾರ್
- ಒಡಲಾಟ ನಾಟಕ ಪ್ರದರ್ಶನ
- ಗಣಪತಿ ಪೆಂಡಾಲ್ನಲ್ಲಿ ಜು.2ರಂದು ಪ್ರದರ್ಶನ
ಚನ್ನರಾಯಪಟ್ಟಣ: ಮಕ್ಕಳು ಅಭಿನಯಿಸಿರುವವ ಒಡಲಾಟ ನಾಟಕ ಪ್ರದರ್ಶನ ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಜು.2ರಂದು ಪ್ರದರ್ಶನಗೊಳ್ಳಲಿದೆ ಎಂದು ಮಹಾರಂಗ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಕುಮಾರ್ ತಿಳಿಸಿದರು.
ಮಹಾರಂಗ ಸಾಂಸ್ಕೃತಿಕ ವೇದಿಕೆಯ ಮಟ್ಟನವಿಲೆ ಮಕ್ಕಳ ತಂಡದಿಂದ ಅಂದು ಸಂಜೆ ದೇವನೂರು ಮಹದೇವ ವಿರಚಿತ ಒಡಲಾಟ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಿ.ಆರ್.ತ್ಯಾಗರಾಜ್, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪರಿಸರವಾದಿ ಚ.ನಾ. ಅಶೋಕ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಾಹಿತಿ ದೇವನೂರು ಮಹಾದೇವ ಅವರ ಕೃತಿಯನ್ನು ಆಧರಿಸಿದ ಈ ನಾಟಕಕ್ಕೆ ಸಿಜಿಕೆ ರಂಗರೂಪ ನೀಡಿದ್ದು, ನವೀನ ಭೂಮಿ ತಿಪಟೂರು ನಿರ್ದೇಶನ ಮಾಡಿದ್ದಾರೆ. ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಿಐಟಿಯು ಮುಖಂಡರಾದ ಎಚ್.ಎಸ್.ಮಂಜುನಾಥ್, ತೇಜಸ್‌ಗೌಡ, ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ, ರಂಗಕರ್ಮಿ ಸಂತೋಷ್ ದಿಂಡಗೂರು ಸುದ್ದಿಗೋಷ್ಠಿಯಲ್ಲಿದ್ದರು.