ರಾಜೂಗೌಡ  
ರಾಜ್ಯ

ಖರ್ಗೆ ಭಾಷಣದ ಸ್ಥಳ ಶುದ್ಧೀಕರಣಕ್ಕೆ ಆಕ್ಷೇಪ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ನರಸಿಂಹ ನಾಯಕ ಹೇಳಿಕೆ
  • ದಲಿತರ ದೂರವಿಟ್ಟು ಹಿಂದುತ್ವ ಬಲಪಡಿಸಲು ಅಸಾಧ್ಯ
ಯಾದಗಿರಿ :

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಿಸಿರುವುದಕ್ಕೆ ಮಾಜಿ ಸಚಿವ ಬಿಜೆಪಿಯ ನರಸಿಂಹ ನಾಯಕ (ರಾಜುಗೌಡ) ತೀವ್ರ ವಿರೋಧ ವ್ಯಕ್ತಪಡಿಸಿz್ದÁರೆ.

ಜಾತಿ ಕಾರಣಕ್ಕೆ ಯಾರಾದರೂ ಸ್ಥಳ ಶುದ್ಧೀಕರಣ ಮಾಡಿದ್ದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇಂತಹ ಘಟನೆ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಮತದ ಹಕ್ಕಿದೆ. ಹಿಂದುತ್ವ ನಿಜವಾಗಿ ಬಲಿಷ್ಠವಾಗಬೇಕಾದರೆ ಎಸ್‌ಸಿ-ಎಸ್‌ಟಿ ಸೇರಿ ಎಲ್ಲ ದಲಿತರನ್ನು ಸಮಾನವಾಗಿ ಕಾಣಬೇಕು. ಅವರನ್ನು ದೂರವಿಟ್ಟು ಹಿಂದುತ್ವದ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದರು.
ದೇವಸ್ಥಾನ ನಿರ್ಮಾಣದ ವೇಳೆ ಕಲ್ಲು ಒಡೆಯುವುದು, ಗೋಡೆ ಕಟ್ಟುವುದು ಸೇರಿ ಹಲವು ಕೆಲಸಗಳಲ್ಲಿ ದಲಿತರ ಶ್ರಮ ಪಡೆಯಲಾಗುತ್ತದೆ. ಆದರೆ ಜಾತಿ ಹೆಸರಿನಲ್ಲಿ ದೂರವಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ರಾಜುಗೌಡ, ವಿಜಯನಗರದಲ್ಲಿ ಸ್ವಾತಂತ್ರ‍್ಯ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲೊಪ್ಪದ ಸಚಿವ ಜಮೀರ್ ಅವರನ್ನು ಸಿಎಂ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅನಾರೋಗ್ಯ ಅಥವಾ ಅನಿವಾರ್ಯ ಕಾರಣವಿದ್ದರೆ ಬೇರೆ. ಆದರೆ ಧ್ವಜಾರೋಹಣಕ್ಕೆ ಗೈರಾಗಲು ಯಾವುದೇ ಸಮಂಜಸ ಕಾರಣವಿಲ್ಲದಿದ್ದರೆ ಸಿಎಂ ಗಂಭೀರ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ನಾಗೇಂದ್ರಗೆ ಸಚಿವ ಸ್ಥಾನ ನಾಚಿಕೆಗೇಡು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ನರಸಿಂಹ ನಾಯಕ ಕುಟುಕಿದರು. ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಆ.೧೭ರಿಂದ ರಾಜ್ಯದ ಎಲ್ಲ ಜಿ¯್ಲÁಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ೨೩ರಂದು ದೇವದುರ್ಗದಿಂದ ಪಾದಯಾತ್ರೆ ಆರಂಭಿಸಿ ಮಾನ್ವಿ ಮೂಲಕ ಬಳ್ಳಾರಿವರೆಗೆ ಸಾಗುವ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಇದರಲ್ಲಿ ಎಲ್ಲ ಭ್ರಷ್ಟ ಸಚಿವರ ರಾಜೀನಾಮೆಗೂ ಆಗ್ರಹಿಸಬೇಕು. ಈ ಕುರಿತು ಬಿಜೆಪಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಆರ್‌ಎಸ್‌ಎಸ್ ಬಿಟ್ಟು ರಾಜ್ಯದ ಪ್ರಗತಿಗೆ ಒತ್ತು ನೀಡಿ

ಆರ್‌ಎಸ್‌ಎಸ್ ಬೆನ್ನು ಬೀಳುವುದನ್ನು ಬಿಟ್ಟು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ನರಸಿಂಹ ನಾಯಕ ಸಲಹೆ ನೀಡಿದರು. ಅವರು ನನ್ನ ಆತ್ಮೀಯ ಸೋದರರಿದ್ದಂತೆ. ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಬೇಕು ಎಂಬುದು ನಮ್ಮ ಆಸೆ. ಆರ್‌ಎಸ್‌ಎಸ್ ರಾಷ್ಟç ನಿರ್ಮಾಣಕ್ಕಾಗಿ ಹಲವು ಸಾಮಾಜಿಕ ಕಾರ್ಯ ಮಾಡುತ್ತಿದೆ. ಪ್ರವಾಹ, ಭೂಕಂಪ, ಕರೊನಾ ಸೇರಿ ವಿಪತ್ತಿನ ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಿದೆ ಎಂದರು. ನಾನು ದಲಿತ ಸಂಘರ್ಷ ಸಮಿತಿಯಿಂದ ಬಂದವನು. ಆರ್‌ಎಸ್‌ಎಸ್ ದಲಿತ ವಿರೋಽ ಎಂದು ಆರೋಪಿಸುವುದಾದರೆ ಉದಾಹರಣೆಗಳನ್ನು ನೀಡಿ. ತಪ್ಪಿದ್ದರೆ ನಾವೇ ಪ್ರಶ್ನಿಸುತ್ತೇವೆ. ಆದರೆ ಸುಮ್ಮನೆ ಸಂಘದ ಹೆಸರು ಜಪಿಸುವುದು ಬೇಡ ಎಂದು ಹೇಳಿದರು.