ತ್ಯಾಮಗೊಂಡ್ಲು ಹೋಬಳಿ ಓಬಳಾಪುರದಲ್ಲಿ ಗ್ರಾಮದೇವತೆ ಗಂಗಸಂದ್ರಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ರಥೋತ್ಸವ ನಡೆಯಿತು. ದೇವಸ್ಥಾನದ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ನಟರಾಜು, ಗಂಗಸಂದ್ರಮ್ಮದೇವಿ ಟ್ರಸ್ಟ್ ಕಾರ್ಯದರ್ಶಿ ಮುಪ್ಪಡಿಗಟ್ಟ ಕೆಂಪೇಗೌಡ, ಸದಸ್ಯರಾದ ಶಿವರಾಜು, ನರಸಿಂಹರಾಜು ಇತರರು ಇದ್ದರು.
ತ್ಯಾಮಗೊಂಡ್ಲು : ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಗಂಗಸಂದ್ರಮ್ಮ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ರಥೋತ್ಸವದೊಂದಿಗೆ ಸಂಪನ್ನವಾಯಿತು. ಗಂಗಸಂದ್ರಮ್ಮ ದೇವಿಗೆ ದೇವಸ್ಥಾನದ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ನಟರಾಜು ಹಾಗೂ ಮುಖಂಡರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಾನುವಾರ ನಾಗದೇವತಾ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಕಾರ್ಯಕ್ರಮಗಳು ಮಾರಮ್ಮದೇವಿಗೆ ಉಪಹಾರ, ಸೋಮವಾರ ಮಧ್ಯಾಹ್ನ 3 ಗಂಟೆಗೆ ಗಂಗಸಂದ್ರಮ್ಮದೇವಿಗೆ ಆರತಿ, ಸಂಜೆ 7 ಗಂಟೆಗೆ ಕೊಂಡ ಹಾಯುವ ಕಾರ್ಯಕ್ರಮದಲ್ಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಬುಧವಾರ ಗ್ರಾಮ ದೇವತೆಗೆ ಉಪಾರ, ಆರತಿ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಸದಸ್ಯರಾದ ಪಿ.ಹನುಮಂತಪ್ಪ, ಟಿ.ರಂಗಸ್ವಾಮಿ, ವಸಂತಪುರ ರಾಮಣ್ಣ, ರವಿಕುಮಾರ್, ಅರುಣ್ಕುಮಾರ್, ಎಲ್. ಹನುಮಂತರಾಜು, ಜಯರಾಮ್, ಮೋಹನ್ಕುಮಾರ್, ನಾರಾಯಣ್ಗೌಡ, ಮುಖಂಡರಾದ ಎಸ್.ಮೋಹನ್, ಎನ್.ಸಾಗರ್, ರಂಗನಾಥ್, ಅನಿಲ್, ಲಕ್ಷಿ$್ಮನಾರಾಯಣ್, ರಮೇಶ್, ಕೃಷ್ಣ ಆಚಾರ್ಯ, ಗ್ರಾಮಸ್ಥರು ಇದ್ದರು.