ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಾಯಿತು. ರಾಕೇಶ ಕಾಂಬಳೆ, ಬಿ.ಸುರೇಶ್​, ಭೀಮಾಶಂಕರ ಡಾಂಗೆ, ಸಾಗರ ಪಾಟೀಲ್​, ಶ್ರೀಮಂತಗೌಡ ಪಾಟೀಲ್​, ಪುಂಡಲಿಕ ಟಿ.ಕೆ, ಶಾಮ ಬಿದ್ರಿ ಇತರರಿದ್ದರು. 
ರಾಜ್ಯ

ಕೇಂದ್ರ ಕಾರಾಗೃಹದಲ್ಲಿ ಪ್ರಮಾಣ ವಚನ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದನಾ ವಿರೋಧಿ ದಿನ
ಕಲಬುರಗಿ: ನಗರದ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಭಯೋತ್ಪಾದನಾ ವಿರೋಧಿ ದಿನದ ನಿಮಿತ್ತ ಸಂಸ್ಥೆಯ ಮುಖ್ಯಸ್ಥ ರಾಕೇಶ್​ ಕಾಂಬಳೆ ಅವರು ಕಾರಾಗೃಹದ ಅಧಿಕಾರಿ, ಸಿಬ್ಬಂದಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಮಾತನಾಡಿದ ಕಾಂಬಳೆ, ಯಾವುದೇ ಭಯೋತ್ಪಾದನಾ ಚಟುವಟಿಕೆ ಸಂಶಯಾಸ್ಪದವಾಗಿ ಕಂಡು ಬಂದಲ್ಲಿ ಸಂಬಂಧಿಸಿದ ಪ್ರಾಧಿಕಾರ ಅಥವಾ ಸಾಮಾಜಿಕ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದು ಒಬ್ಬ ಭಾರತೀಯ ನಾಗರಿಕನಾಗಿ ನಿಮ್ಮ ಕರ್ತವ್ಯ ನಿಷ್ಠೆ ಮತ್ತು ಶೃದ್ಧೆಯಿಂದ, ಯಾವುದೇ ಆಮಿಷಕ್ಕೆ ಒಳಗಾಗದೇ ಕಾಯಕ ಮಾಡಬೇಕು ಎಂದು ಹೇಳಿದರು.
ಕಚೇರಿಯ ಸಹಾಯಕ ಅಧೀಕ್ಷಕ ಬಿ.ಸುರೇಶ್​, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್​ಗಳಾದ ಸಾಗರ ಪಾಟೀಲ್​, ಶ್ರೀಮಂತಗೌಡ ಪಾಟೀಲ್​, ಪುಂಡಲಿಕ ಟಿ.ಕೆ, ಶಾಮ ಬಿದ್ರಿ ಹಾಗೂ ಸಂಸ್ಥೆಯ ಶಿಕ್ಷಕ ನಾಗರಾಜ ಮುಲಗೆ, ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.