ಆಳಂದನ ಎಸ್​ಆರ್​ಜಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಯೋಗ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭವನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಉದ್ಘಾಟಿಸಿದರು. ನಾಗರಾಜ ಸಾಲೊಳ್ಳಿ, ಹಣಮಂತ ಶೇರಿ, ಜ್ಯೋತಿ ವಿಶಾಖ ಇದ್ದರು. 
ರಾಜ್ಯ

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಕರೆ
  • ಆಳಂದನಲ್ಲಿ ಯೋಗ ದಿನಾಚರಣೆ
ಆಳಂದ: ಯೋಗ ನಿತ್ಯ ಬದುಕಿನ ಭಾಗವಾದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಹೊಣೆಗಾರಿಕೆ ಎನ್ನುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಕರೆ ನೀಡಿದರು.
ಎಸ್​ಆರ್​ಜಿ ಫೌಂಡೇಶನ್​ ಅಡಿಯ ಎಸ್​ಆರ್​ಜಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕೇವಲ ಪುಸ್ತಕ ಓದುವುದಕ್ಕೆ ಹಚ್ಚುವುದು ನಿಮ್ಮ ಕರ್ತವ್ಯ ಆಗದಿರಲಿ. ಅವರಿಗೆ ಹೊಣೆಗಾರಿಕೆ ನಿಭಾಯಿಸುವ ಮತ್ತು ನಾಯಕತ್ವದ ಗುಣ ಪರಿಚಯಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಯೋಗ ತರಬೇತುದಾರ ನಾಗರಾಜ ಸಾಲೊಳ್ಳಿ ಮಾತನಾಡಿ, ಇಂದಿನ ಮಕ್ಕಳಲ್ಲಿ ನಾಯಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಸಂಸ್ಥೆ ಆಡಳಿತಾಧಿಕಾರಿ ಹಣಮಂತ ಶೇರಿ, ಪ್ರಾಚಾಯೆರ್ ಜ್ಯೋತಿ ವಿಶಾಖ ಇತರರಿದ್ದರು. ಯೋಗ ಪ್ರಾತ್ಯಕೆಯಲ್ಲಿ ಸುಮಾರು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
"

ಬಹುತೇಕ ಮಕ್ಕಳು ಸಿನಿಮಾ ಹೀರೋ, ವಿವಿಧ ಆಟಗಾರರನ್ನು ತಮ್ಮ ರೋಲ್​ ಮಾಡೆಲ್​ ಆಗಿಟ್ಟುಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ನಮ್ಮ ಜೀವನ ಸದೃಢ, ಸುಶಿಕ್ಷಿತವಾಗಿರಲಿ ಎಂದು ನಿತ್ಯ ಹಾರೈಸುವ ಅಪ್ಪ-ಅಮ್ಮ ನಮಗೆ ನಿಜವಾದ ಹೀರೋಗಳು. ಅವರನ್ನೇ ನಾವು ಫಾಲೋ ಮಾಡಬೇಕಿದೆ. ಉಳಿದವರೆಲ್ಲ ನಮ್ಮ ಮನರಂಜನೆ ನೀಡುವವರು.

— > ಸುಭಾಷ ಗುತ್ತೇದಾರ್​, ಮಾಜಿ ಶಾಸಕ