- * ಪ್ರಶಸ್ತಿಯು 5 ಸಾವಿರ ನಗದು, ಪುರಸ್ಕಾರ ಒಳಗೊಂಡಿದೆ
ಬೆಂಗಳೂರು: ಕರ್ನಾಟಕ ವಿಕಾಸ ರಂಗ ವತಿಯಿಂದ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಹೆಸರಿನಲ್ಲಿ ನೀಡುವ ‘ನುಡಿಸಿರಿ ಸಾಹಿತ್ಯ ಪ್ರಶಸ್ತಿ’ 2026ನೇ ಸಾಲಿಗೆ ಹಿರಿಯ ಸಾಹಿತಿ ಎಸ್. ಗೋಪಾಲಗೌಡ ಕಲ್ವ ಮಂಜಲಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು 5 ಸಾವಿರ ನಗದು, ಪುರಸ್ಕಾರ ಒಳಗೊಂಡಿದೆ. ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕೋಲಾರ ಜಿಲ್ಲೆಯ ಎಸ್. ಗೋಪಾಲಗೌಡ ಕಲ್ವ ಮಂಜಲಿ ಅವರು, ಕವನ ಸಂಕಲನ, ಕಥಾಸಂಕಲನ, ನಾಟಕ, ಕಾದಂಬರಿ, ಜನಪದ ಸಾಹಿತ್ಯ ಹಾಗೂ ಜೀವನ ಚರಿತ್ರೆ ಸೇರಿ ಒಟ್ಟು 31 ಕೃತಿಗಳನ್ನು ರಚಿಸಿದ್ದಾರೆ. 2025ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಹಿತ್ಯ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ.