ಕಲಬುರಗಿಯ ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರಕ್ಕೆ ನ್ಯಾಯವಾದಿ ಹಣಮಂತರಾಯ ಅಟ್ಟೂರ ಚಾಲನೆ ನೀಡಿದರು. ಡಾ.ನೀಲಕಂಠ ಕಣ್ಣಿ, ಡಾ.ಶರಣಪ್ಪ ಗುಂಡಗುರ್ತಿ, ಮಾಲಕಾರಿ ಪೂಜಾರಿ, ಅರುಣಾ ಗಡಾಳೆ, ವಸಂತಕುಮಾರ ರಾಠೋಡ್ ಇತರರಿದ್ದರು.
- ಹಣಮಂತರಾಯ ಅಟ್ಟೂರ ಅಭಿಮತ
- ಹಿಂಗುಲಾಂಬಿಕಾ ಕಾಲೇಜಿನಲ್ಲಿ ಶಿಬಿರ
ಕಲಬುರಗಿ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವುದೇ ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.
ಶ್ರೀ ಹಿಂಗುಲಾಂಬಿಕ ಆಯುರ್ವೇದಿಕ್ ಕಾಲೇಜಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರ ಸಮಾರೋಪದಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ, ಸ್ವಚ್ಛತೆ, ಪರಿಸರ ಸಂರಣೆ, ರಕ್ತದಾನ, ಆರೋಗ್ಯ ಜಾಗೃತಿ ಹಾಗೂ ಸಾರತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಪ್ರಾಂಶುಪಾಲೆ ಡಾ.ಗೀತಾ ಮೋರೆ ಅಧ್ಯಕ್ಷತೆ ವಹಿಸಿದ್ದರು.
ಎಂಜೆಪಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ ಕಣ್ಣಿ, ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶರಣಪ್ಪ ಗುಂಡಗುರ್ತಿ, ಪ್ರಮುಖರಾದ ಮಾಲಕಾರಿ ಪೂಜಾರಿ, ಅರುಣಾ ಗಡಾಳೆ, ವಸಂತಕುಮಾರ ರಾಠೋಡ್, ನಾಗೇಂದ್ರ ಮಾನೆ, ಅನಿಲಕುಮಾರ ಪವಾರ್, ರಮೇಶ ಯಾಳಗಿ, ಮದರಸಾಬ್, ಶರಣಬಸಪ್ಪ ಕಂದಗೂಳ, ಡಾ. ಜ್ಯೋತಿ ಪಾಟೀಲ್, ಡಾ.ಶಿವಲೀಲಾ ಎಸ್., ಡಾ.ಭುವನೇಶ್ವರಿ ಮರಬ, ಅಂಬಿಕಾ ಬಸ್ಮೆ, ರೇಷ್ಮಾ ಹೊಸಮನಿ, ರೇಣುಕಾ ಸ್ವಾಮಿ ಇತರರಿದ್ದರು.
ಭೀಮನಗೌಡ, ಐಶ್ವರ್ಯ ನಿರೂಪಣೆ ಮಾಡಿದರು. ರಾವೇಂದ್ರ ಸ್ವಾಗತಿಸಿದರು. ಮೇಘಾ ಹೊಸಮನಿ ವಂದಿಸಿದರು.