ಬೀದರ್​ ತಾಲೂಕಿನ ಆಣದೂರ ಗ್ರಾಮದಲ್ಲಿ ಆಯೋಜಿಸಿದ ಎನ್​ಎಸ್​ಎಸ್​ ಶಿಬಿರದಲ್ಲಿ ಡಾ.ವಿನಿತಾ ಪಾಟೀಲ್​, ಮೀನಾ ಗುಮ್ತಾಪುರೆ, ಚೇತನ್​ ಸೋರಳ್ಳಿ, ಡಾ.ಬಸವಲಿಂಗ ಸ್ವಾಮಿ ಇತರರಿದ್ದರು. 
ರಾಜ್ಯ

ವ್ಯಕ್ತಿತ್ವ ವಿಕಸನಕ್ಕೆ ಎನ್​ಎಸ್​ಎಸ್​ ಶಿಬಿರ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಡಾ.ವಿನಿತಾ ಪಾಟೀಲ್​ ಅನಿಸಿಕೆ
  • ಆಣದೂರನಲ್ಲಿ ಕಾರ್ಯಕ್ರಮ
ಬೀದರ್​: ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಲಿಂಗರಾಜಪ್ಪ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾಯೆರ್ ಡಾ.ವಿನಿತಾ ಪಾಟೀಲ್​ ಹೇಳಿದರು.
ಲಿಂಗರಾಜಪ್ಪ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಯೋಜನಾ ಟಕದ ವತಿಯಿಂದ ತಾಲೂಕಿನ ಆಣದೂರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ವಿದ್ಯೆ ಜತೆಗೆ ಸೇವಾ ಮನೋಭಾವನೆ ಇರಬೇಕು. ಪಠ್ಯ ಶಿಣದೊಂದಿಗೆ ಪಠ್ಯೇತರ ಚಟವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯರಾದ ಮಾತೋಶ್ರೀ ಡಾ.ದಾಾಯಣಿ ಎಸ್​. ಅಪ್ಪ, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ವಾರ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯೆ ಮೀನಾ ಮಾದಪ್ಪ ಗುಮ್ತಾಪುರೆ ಉದ್ಘಾಟಿಸಿದರು. ವಿವೇಕಾನಂದ ಚಾರಿಟೇಬಲ್​ ಟ್ರಸ್ಟ್​ ಅಧ್ಯ ಚೇತನ್​ ಸೋರಳ್ಳಿ, ವೀರಂತಯ್ಯ ಸ್ವಾಮಿ, ಪ್ರೊ.ಸಂಪತಕುಮಾರ, ಪ್ರೊ.ಲತಾ, ಬಸವರಾಜ, ದತ್ತಾತ್ರಿ ಕುಲಕರ್ಣಿ, ಪ್ರೊ.ರೇವಣಸಿದ್ದಪ್ಪ, ನೇಹಾ ಮಾಶೆಟ್ಟಿ ಇತರರಿದ್ದರು. ರಾಷ್ಟ್ರೀಯ ಯೋಜನಾ ಟಕದ ಸಂಯೋಜಕ ಅಧಿಕಾರಿ ಡಾ.ಬಸವಲಿಂಗ ಸ್ವಾಮಿ ಸ್ವಾಗತಿಸಿದರು.