NREGA is a support for self-reliant living
ಕುಣಿಗಲ್: ತಾಲೂಕಿನ ಕೊತ್ತಗೆರೆ ಹೋಬಳಿಯ ತೆರೆದಕುಪ್ಪೆ ಗ್ರಾಪಂ ವ್ಯಾಪ್ತಿ ಒಂದರಲ್ಲೇ 50.30 ಕೋಟಿ ರೂ. ವೆಚ್ಚದಲ್ಲಿ ಅಭಿವದ್ಧಿ ಕಾಮಗಾರಿಗಳನ್ನು ಕೆಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿ ತರೇದಕುಪ್ಪೆ ಗ್ರಾಪಂ ನೂತನ ಗ್ರಾಮಸೌಧ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದು, ವಡ್ಡರಕುಪ್ಪೆ ಗೇಟ್ನಿಂದ ತರೇದಕುಪ್ಪೆವರಗೆ 8 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ, ನರ್ಜನಕುಪ್ಪೆ ರಸ್ತೆಗೆ 2.50 ಕೋಟಿ, ಕೊಪ್ಪಲಬಾರೆ ರಸ್ತೆಗೆ 2.50 ಕೋಟಿ, ಹಾಲಗೋನಹಳ್ಳಿ 80 ಲ, ಗೊಲ್ಲರಹಟ್ಟಿ 40 ಲ, ಸುಂದರಕುಪ್ಪೆ, ಗಿಡದಪಾಳ್ಯ ಮಣ್ಣಿನ ರಸ್ತೆಗೆ 6 ಕೋಟಿ, ಕಲ್ಲಪಾಳ್ಯ 80 ಲ, ಗೊಲ್ಲರಹಟ್ಟಿ ಒಂದು ಕೋಟಿ, ಮಣ್ಣನಪಾಳ್ಯ, ನಾಗನಹಳ್ಳಿ ರಸ್ತೆಗೆ 2.50 ಕೋಟಿ, ಗಿಡದಪಾಳ್ಯ 80 ಲ, ತೆರೆದಕುಪ್ಪೆ ಸಿ.ಸಿ ರಸ್ತೆ 1 ಕೋಟಿ ಹಾಗೂ ಮುರಾರ್ಜಿ ದೇಸಾಯಿ ಶಾಲೆಗೆ 25 ಕೋಟಿ ರೂ. ಸರ್ಕಾರದಿಂದ ಮಂಜೂರು ಮಾಡಿಸಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಜನರ ಬದುಕು ಹಸನು ಮಾಡಲು ಮತ್ತು ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯುಪಿಎ ಸರ್ಕಾರದ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು, ನರೇಗಾ ಯೋಜನೆ ಗ್ರಾಮೀಣ ರೆತಾಪಿ ಜನರಿಗೆ ಆರ್ಥಿಕ ಶಕ್ತಿ ನೀಡುವ ಮೂಲಕ, ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಆದರೆ ಎನ್ಡಿಎ ಸರ್ಕಾರ ನರೇಗಾ ಬದಲಿಗೆ 'ಬಿ&ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆುಂದ ಹಳ್ಳಿಗಾಡಿನ ರೆತಾಪಿ ಜನರ ಆರ್ಥಿಕ ಅಭಿವದ್ದಿಗೆ ಮಾರಕವಾಗಿದೆ ಎಂದು ತಿಳಿಸಿದರು.
ತಾಪಂ ಇಒ ವಸಂತಕುಮಾರ್ ಮಾತನಾಡಿ, ಸ್ಥಳಿಯ ಜನರಿಗೆ ಮೂಲ ಸೌಲಭ್ಯಗಳು ದೊರಕಿಸಿಕೊಡಲು ಗ್ರಾಪಂ ಕೆಲಸ ಮಾಡುತ್ತಿವೆ, ಇದನ್ನು ಗ್ರಾಮಸ್ಥರು ಸದ್ಬಳಕ್ಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಪಂ ಅಧ್ಯೆ ಎಂ.ಎಸ್.ನಾಗರತ್ನ ಹುಚ್ಚಪ್ಪ ಮಾತನಾಡಿ, ನಮ್ಮ ಅಧಿಕಾರ ಅವಧಿಯಲ್ಲಿ ಎಲ್ಲ ಸದಸ್ಯರು ಸಂಟಿತರಾಗಿ ಉತ್ತಮ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದರು.