ಮುದಗಲ್‌ನಲ್ಲಿ ನಿಯಮ ಮೀರಿದ ರಸಗೊಬ್ಬರ ಅಂಗಡಿ ಮಾಲೀಕರಿಗೆ ಲಿಂಗಸೂಗೂರು ಸಹಾಯಕ ಕೃಷಿ ನಿರ್ದೇಶಕಿ ವಿಜಯಾಮೂರ್ತಿ ಅವರು ಮಂಗಳವಾರ ನೋಟಿಸ್ ಜಾರಿಗೊಳಿಸಿದರು. ಕೃಷಿ ಇಲಾಖೆ ಅಧಿಕಾರಿಗಳಾದ ಅಮರೇಗೌಡ, ಶ್ರೀಶೈಲ ಇತರರಿದ್ದರು.  
ರಾಜ್ಯ

ರಸಗೊಬ್ಬರ ಅಂಗಡಿಗಳಿಗೆ ನೋಟಿಸ್

JAGADEESH KUMBAR
ಮುದಗಲ್: ಪಟ್ಟಣದ ರಸಗೊಬ್ಬರ ಅಂಗಡಿಗಳಿಗೆ ಲಿಂಗಸೂಗೂರು ಸಹಾಯಕ ಕೃಷಿ ನಿರ್ದೇಶಕಿ ವಿಜಯಾಮೂರ್ತಿ ಮಂಗಳವಾರ ಭೇಟಿ ನೀಡಿ, ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದರು. 
ಪ್ರತಿ ತಿಂಗಳು 5ನೇ ತಾರೀಖಿನೊಳಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ರಸಗೊಬ್ಬರಗಳ ಆರಂಭದ ಶುಲ್ಕ ಹಾಗೂ ಮಾರಾಟ ಮಾಡಿದ ಶುಲ್ಕ ವಿವರ ಸಲ್ಲಿಸಿಲ್ಲ.
 ನಿಗದಿಪಡಿಸಿದ ದರ್ಜೆಯಲ್ಲದ ರಸಗೊಬ್ಬರ ಮಾರಾಟ ಹಾಗೂ ದಾಸ್ತಾನು ಮಾಡಿರುವುದು ಕಂಡು ಬಂದಿರುವುದು ಸೇರಿದಂತೆ ಇಲಾಖೆಯ ಅನೇಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 
ಎಲ್ಲವನ್ನು ಪರಿಗಣಿಸಿ ಮಾರಾಟಗಾರರಿಗೆ ನೋಟಿಸ್ ಜಾರಿಗೊಳಿಸಿದ್ದು, 3 ದಿನಗಳೊಳಗಾಗಿ ಪ್ರತಿಕ್ರಿಯಿಸಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಸಿದರು. ಕೃಷಿ ಇಲಾಖೆ ಅಧಿಕಾರಿಗಳಾದ ಅಮರೇಗೌಡ, ಶ್ರೀಶೈಲ ಇತರರಿದ್ದರು.