ಬನಹಟ್ಟಿಯಲ್ಲಿ ಜೇಡರ ದಾಸಿಮಯ್ಯ ದೇವಸ್ಥಾನ ಆವರಣದಲ್ಲಿ ಹಟಗಾರ ಜೇಡರ ಸಮಾಜ ಅಭಿವದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ಸಸಿ ನೆಟ್ಟು ಮಾತನಾಡಿದರು. ಸಮಾಜದ ಮುಖಂಡ ಸೋಮು ಗೊಂಬಿ, ಸುರೇಶ ಬೀಳಗಿ, ಮಾಲಾ ಬಾವಲತ್ತಿ, ದೇವೇಂದ್ರ ಶೀಲವಂತ, ಶಿವಾನಂದ ಬೆಳ್ಳಿವರಿ ಇತರರಿದ್ದರು. 
ರಾಜ್ಯ

ಸಸಿ ನೆಡುವುದಷ್ಟೇ ಅಲ್ಲ ಪೋಷಣೆಯೂ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿದ್ದು ಸವದಿ ಹೇಳಿಕೆ
  • ವನಮಹೋತ್ಸವ ಕಾರ್ಯಕ್ರಮ
ರಬಕವಿ/ಬನಹಟ್ಟಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ವನಮಹೋತ್ಸವದಂತಹ ಕಾರ್ಯಕ್ರಮಗಳು ಪರಿಸರದ ಕುರಿತು ಜನರಲ್ಲಿ ಜಾಗತಿ ಮೂಡಿಸುವ ಪರಿಣಾಮಕಾರಿ ವೇದಿಕೆಗಳಾಗಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯಲ್ಲಿ ಜೇಡರ ದಾಸಿಮಯ್ಯ ದೇವಸ್ಥಾನ ಆವರಣದಲ್ಲಿ ಹಟಗಾರ ಜೇಡರ ಸಮಾಜ ಅಭಿವದ್ಧಿ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ವನಮಹೋತ್ಸವದಲ್ಲಿ ಮಾತನಾಡಿದರು
ಮರಗಳು ಪ್ರಕತಿಯ ಅಮೂಲ್ಯ ಸಂಪತ್ತು. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು. ಸಸಿ ನೆಡುವುದಷ್ಟೇ ಸಾಕಾಗುವುದಿಲ್ಲ, ಅದರ ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನೂ ವಹಿಸಬೇಕು ಎಂದು ಕರೆ ನೀಡಿದರು.
ಸಮಾಜದ ಮುಖಂಡ ಸೋಮು ಗೊಂಬಿ ಮಾತನಾಡಿ, ಪರಿಸರ ಸಂರಕ್ಷಣೆಗೆ ತಮ್ಮ ಸಮಾಜ ಬದ್ಧವಾಗಿದ್ದು, ಪ್ರತಿವರ್ಷ 100 ಸಸಿಗಳನ್ನು ನೆಟ್ಟು ಅವುಗಳ ಸಮರ್ಪಕ ಪಾಲನೆ-ಪೋಷಣೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಸುರೇಶ ಬೀಳಗಿ, ಮಾಲಾ ಬಾವಲತ್ತಿ, ದೇವೇಂದ್ರ ಶೀಲವಂತ, ಶಿವಾನಂದ ಬೆಳ್ಳಿವರಿ, ಈರಣ್ಣ ಕೊಣ್ಣೂರ, ಚನ್ನು ಸೇರಿ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.