ಮಡಿವಾಳ ಮಾಚಿದೇವ 
ರಾಜ್ಯ

ಅರಸುತನ ಮೇಲಲ್ಲ, ಅಗಸತನ ಕೀಳಲ್ಲ..! ಮಾಚಿದೇವರ ಜಯಂತಿಯಂದು ಮರೆಯದಿರಿ ಮಡಿವಾಳರ ಬೇಡಿಕೆ

ಪ್ರಮುಖ ಮುಖ್ಯಾಂಶಗಳು

  • ಅರಸುತನ ಮೇಲಲ್ಲ, ಅಗಸತನ ಕೀಳಲ್ಲ..!
  • ಫೆ.1ಕ್ಕೆ ಸರ್ಕಾರದಿಮದ ಮಡಿವಾಳ ಮಾಚಿದೇವರ ಜಯಂತಿ
  • ಮಡಿವಾಳರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಒತ್ತಾಯ

ಪ್ರಶಾಂತರಿಪ್ಪನ್​ಪೇಟೆ,ಬೆಂಗಳೂರು :ಜಾತಿ,ಮತ,ಕಾಯಕದಿಂದ ಯಾರೂಮೇಲಲ್ಲ, ಯಾರೂಕೀಳಲ್ಲ ಎಂಬ ಸಮ ಸಮಾಜದ ಪರಿಕಲ್ಪನೆಯನ್ನುಜಗತ್ತಿಗೆ ಸಾರಿದ 12ನೇಶತಮಾನದ ಶರಣರು ಕ್ರಾಂತಿಪುರುಷರು.ಮಹಾಮನೆಯಕ್ರಾಂತಿಕಾರಿ,ಕಾಯಕ ಯೋಗಿ,ವೀರವ್ರತಪರಿಪಾಲಕನೆಂದು ಪ್ರಶಂಸೆ ಪಡೆದಿದ್ದಮಡಿವಾಳ ಮಾಚಿದೇವರ ಜಯಂತಿ ಫೆ.1ಕ್ಕೆಆಚರಿಸಲಾಗುತ್ತಿದೆ.

ಮಾಚಿದೇವರಜಯಂತಿ ಆಚರಣೆಯಂತೂ ವಿಜೃಂಭಣೆಯಿಂದರಾಜ್ಯ, ಜಿಲ್ಲಾ,ತಾಲೂಕು ಮಟ್ಟದಲ್ಲಿನಡೆಯುತ್ತಿದೆ.ಆದರೆ ರಾಜ್ಯದಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತಸಣ್ಣ ಸಮುದಾಯವಾಗಿರುವ ಮಡಿವಾಳಸಮಾಜದ ಬೇಡಿಕೆಗಳು ಮಾತ್ರ ದಶಕಗಳಿಂದಈಡೇರದೆ ಹಾಗೇ ಉಳಿದಿವೆ.ಸರ್ಕಾರದ ಅಂಕಿಅಂಶದ ಪ್ರಕಾರ 7ಲಕ್ಷ ಜನಸಂಖ್ಯೆಇರುವ ಮಡಿವಾಳ ಸಮುದಾಯ,ಜನಸಂಖ್ಯೆಯದೃಷ್ಟಿಯಿಂದ ತಮ್ಮ 10ಪಟ್ಟು ಹೆಚ್ಚಿಗೆಇರುವ ಸಮುದಾಯಗಳ ಜತೆ ಸಾಮಾಜಿಕವಾಗಿ,ಶೈಕ್ಷಣಿಕವಾಗಿಹಾಗೂ ಔದ್ಯೋಗಿಕವಾಗಿ ಹೋರಾಟಮಾಡಬೇಕಾದ ಅನಿವಾರ್ಯತೆಯನ್ನುಎದುರಿಸುತ್ತಿದೆ.

ರಾಜಕೀಯಮೇಲಾಟದಲ್ಲಿ ಮತದಾರರ ಸಂಖ್ಯೆಯೇಮುಖ್ಯ. ಯಾವಸಮುದಾಯದ ಬಳಿ ಮತಗಳಿವೆಯೋ ಅವರಿಗೆರಾಜಕೀಯ ಅವಕಾಶ,ಬೇಡಿಕೆಗಳಈಡೇರಿಕೆ ಸಾಮಾನ್ಯ.ಆದರೆ ಇಡೀರಾಜ್ಯದಲ್ಲಿ ಹಂಚಿ ಹರಿದು ಹೋಗಿರುವಮಡಿವಾಳ ಸಮುದಾಯ,ಯಾವುದೇ ಎಂಎಲ್‌ಎ,ಎಂಪಿ ಕ್ಷೇತ್ರಗಳಲ್ಲೂನಿರ್ಣಾಯಕರಲ್ಲದೇ ಇರುವುದರಿಂದದಶಕಗಳಿಂದ ಇವರ ಬೇಡಿಕೆಗಳ ಕಡತಮುಂದೆ ಸಾಗುತ್ತಿಲ್ಲ.

ಪರಿಶಿಷ್ಟಜಾತಿ ಪಟ್ಟಿಗೆ ಸೇರಿಸಲು ಒತ್ತಾಯ

ಬಟ್ಟೆತೊಳೆಯುವ ಕುಲಕಸುಬು ಹೊಂದಿರುವಮಡಿವಾಳ ಸಮುದಾಯವು ಆರ್ಥಿಕವಾಗಿ,ಸಾಮಾಜಿಕವಾಗಿಬಹಳ ಹಿಂದುಳಿದಿದೆ. ಹಿಂದಿನ ಕಾಲದಹಾಗೆ ಇಡೀ ಊರಿನವರ ಬಟ್ಟೆಗಳನ್ನುಒಗೆದು, ಇಸಿಮಾಡುವ ಪರಿಸ್ಥಿತಿ ಈಗಿಲ್ಲ.ಹಾಗಂತ ಕುಲಕಸುಬುಬಿಟ್ಟು ಎಲ್ಲರೂ ಬೇರೆ ಉದ್ಯೋಗವನ್ನುಮಾಡುವ ಆರ್ಥಿಕ ಸಾಮರ್ಥ್ಯವಾಗಲಿ,ಶಿಕ್ಷಣ ಮತ್ತುಉದ್ಯೋಗದಲ್ಲಿ ಮೀಸಲಾತಿಯಾಗಲಿದೊರೆಯುತ್ತಿಲ್ಲ.

ಹಾಲಿಮಡಿವಾಳ ಸಮುದಾಯವು 2ಎಪ್ರವರ್ಗದಲ್ಲಿದೆ.2ಎ ಪ್ರವರ್ಗದಲ್ಲಿ116 ಜಾತಿಗಳಿದ್ದು,50-60 ಲಕ್ಷ ಜನಸಂಖ್ಯೆಇರುವ ಸಮುದಾಯಗಳೊಂದಿಗೆ ಹೋರಾಟಮಾಡುವುದು ಅಷ್ಟು ಸುಲಭವಲ್ಲಎಂಬುದು ಸಮುದಾಯದ ಕೊರಗು.ಆ ಕಾರಣದಿಂದಲೇ1933ರಲ್ಲಿಸ್ಥಾಪನೆಯಾಗಿರುವ ಕರ್ನಾಟಕರಾಜ್ಯ ಮಡಿವಾಳರ ಸಂಘವು ತಮ್ಮಸಮುದಾಯವನ್ನು ಪರಿಶಿಷ್ಟ ಜಾತಿಗೆಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನುದಶಕಗಳಿಂದ ಮಾಡುತ್ತಲೇ ಬಂದಿದೆ.ಆದರೆ ಈ ವರೆಗೆಅಗಸರ ಬೇಡಿಕೆ ಆಳುವ ಅರಸರಿಗೆಅರ್ಥವಾಗದಿರುವುದು ಮಾತ್ರವಿಪರ್ಯಾಸ.

2009ರಲ್ಲಿಅಂದಿನ ಸಿಎಂ ಯಡಿಯೂರಪ್ಪ ಅವರಸೂಚನೆಯಂತೆ ಮೈಸೂರು ವಿವಿ ಪ್ರೊೆಸರ್ಅನ್ನಪೂರ್ಣಮ್ಮ ನೇತೃತ್ವದಲ್ಲಿಕುಲಶಾಸೀಯ ಅಧ್ಯಯನ ನಡೆಸಿಸಿದ್ದಪಡಿಸಿದ ವರದಿಯನ್ನುಸರ್ಕಾರಕ್ಕೆ ಸಲ್ಲಿಸಲಾಗಿದ್ದು,ನಂತರ ಸಚಿವಸಂಪುಟದ ಮುಂದೆ ವರದಿ ಚರ್ಚೆಗೆಕೂಡ ಬಂದಿತ್ತು.ಆದರೆ ಕೆಲ ಪ್ರಭಾವಿಸಚಿವರ ವಿರೋಧದಿಂದಾಗಿ ವರದಿಅಂಗೀಕಾರವಾಗದೆ,ಕೇಂದ್ರಕ್ಕೆಶಿಾರಸ್ಸು ಮಾಡದೆ ಕಡತ ಈಗಲೂಸರ್ಕಾರದ ಮುಂದೆ ಬಾಕಿ ಉಳಿದುಕೊಂಡಿದೆ.ದೇಶದ 17ರಾಜ್ಯ ಮತ್ತು3 ಕೇಂದ್ರಾಡಳಿತಪ್ರದೇಶದಲ್ಲಿ ಪರಿಶಿಷ್ಟ ಜಾತಿಮಾನ್ಯತೆ ಪಡೆದಿರುವ ಮಡಿವಾಳಸಮುದಾಯಕ್ಕೆ ರಾಜ್ಯದಲ್ಲೂಪರಿಶಿಷ್ಟ ಜಾತಿ ಮಾನ್ಯತೆನೀಡಬೇಕೆಂಬುದು ಸಮುದಾಯದ ಆಗ್ರಹ.

ದೋಬಿಘಾಟ್, ಶಿಕ್ಷಣಸಂಸ್ಥೆಗೆ ಜಾಗದ ಕೊರತೆ

ರಾಜಧಾನಿಬೆಂಗಳೂರಿನಲ್ಲಿ ಸದ್ಯ 32ದೋಬಿಘಾಟ್‌ಗಳಿವೆ.ಆದರೆ ಅವುಗಳಹಕ್ಕುಪತ್ರವನ್ನು ಇಂದಿಗೂಕೊಟ್ಟಿಲ್ಲ.ಬಟ್ಟೆ ತೊಳೆಯಲುಬಳಸುವ ಮಿಷನ್‌ಗಳ ವಿದ್ಯುತ್ಸಂಪರ್ಕವನ್ನು ವಾಣಿಜ್ಯ ದರದಂತೆಲೆಕ್ಕ ಹಾಕಿ ಲಕ್ಷಾಂತರ ರೂಪಾಯಿಬಿಲ್ ಕಟ್ಟುವಂತೆ ನೋಟಿಸ್ನೀಡಲಾಗಿದೆ.ರಾಜ್ಯದ ದೋಬಿಘಾಟ್‌ಗಳಿಗೆ ರಿಯಾಯಿತಿ ದರದಲ್ಲಿವಿದ್ಯುತ್ ನೀಡುವಂತೆ ಸಂಘ ಹಲವುವರ್ಷಗಳಿಂದ ವಿನಂತಿ ಮಾಡಿದರೂಪ್ರಯೋಜನವಾಗಿಲ್ಲ.

ಆಸ್ಪತ್ರೆಗಳಬಟ್ಟೆಗಳನ್ನು ಒಗೆಯುವುದರಿಂದರೋಗ ಭೀತಿ ಇದ್ದು,ರಕ್ಷಣೆ ಇಲ್ಲ.ಕಾರ್ಮಿಕ ಇಲಾಖೆಯಿಂದಯಾವುದೇ ಸೌಲಭ್ಯ ದೊರೆಯುತ್ತಿಲ್ಲ.ರಾಜ್ಯದ ಹಲವುಜಿಲ್ಲೆ,ತಾಲೂಕುಗಳಲ್ಲಿದೋಬಿಘಾಟ್‌ಗೆ ಜಾಗವಿಲ್ಲ.ಸಮುದಾಯದ ಮಕ್ಕಳವಿದ್ಯಾಭ್ಯಾಸಕ್ಕೆ ಶಿಕ್ಷಣಸಂಸ್ಥೆ ಸ್ಥಾಪಿಸಲು ಜಾಗ ನೀಡುವಂತೆಹಲವು ವರ್ಷಗಳಿಂದ ವಿನಂತಿ ಮಾಡಿದರೂಪ್ರಯೋಜವಾಗಿಲ್ಲ.ರಾಜಧಾನಿಯಲ್ಲಿಸಂಘದ ಸದಸ್ಯರು ಹಣ ಖರ್ಚು ಮಾಡಿಕೇವಲ 30 ವಿದ್ಯಾರ್ಥಿಗಳಿಗೆಅವಕಾಶ ನೀಡಲು ಸಾಧ್ಯವಾಗಿದ್ದು,ಈಗಿರುವ ಕಟ್ಟಡಬಹಳ ಶಿಥಿಲಗೊಂಡಿದ್ದು,ನೂತನ ಕಟ್ಟಡಕ್ಕೆಅನುದಾನ, ನೂತನಶಿಕ್ಷಣ ಸಂಸ್ಥೆಗೆ ಜಾಗ,ರಾಜ್ಯದ ಬೇರೆಡೆದೋಬಿಘಾಟ್‌ಗೆ ಜಾಗ ನೀಡಲು ಸಮುದಾಯದಮುಖಂಡರು ಒತ್ತಾಯಿಸಿದ್ದಾರೆ.