ಉತ್ತರ ಕರ್ನಾಟಕ ಜನಪದ ಗಾಯಕ ಮ್ಯೂಸಿಕ್​ ಮೈಲಾರಿ 
ರಾಜ್ಯ

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜನಪದ ಗಾಯಕ ಮ್ಯೂಸಿಕ್​ ಮೈಲಾರಿ ಅರೆಸ್ಟ್​! Music Mailari

ಪ್ರಮುಖ ಮುಖ್ಯಾಂಶಗಳು

  • ಮ್ಯೂಸಿಕ್​ ಮೈಲಾರಿ ವಿರುದ್ಧ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ
  • ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್​ ಮೈಲಾರಿ ಅರೆಸ್ಟ್​​
  • ವಿಜಯಪುರ ಜಿಲ್ಲೆ ತಿಕೋಟದಲ್ಲಿ ಇಂದು ನಸುಕಿನ ಜಾವ ತೇರದಾಳ ಪೊಲೀಸರಿಂದ ಬಂಧನ
ಬಾಗಲಕೋಟೆ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮ್ಯೂಸಿಕ್​ ಮೈಲಾರಿ ( Music Mailari ) ಎಂದೇ ಖ್ಯಾತಿಯಾಗಿರುವ ಉತ್ತರ ಕರ್ನಾಟಕ ಜನಪದ ಗಾಯಕನನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಮೈಲಾರಪ್ಪ ಸಣ್ಣಕಲಕಪ್ಪ ಮಡಿವಾಳರ (29) ಉರ್ಫ್ ಮ್ಯೂಸಿಕ್ ಮೈಲಾರಿಯನ್ನು ವಿಜಯಪುರ ಜಿಲ್ಲೆ ತಿಕೋಟದಲ್ಲಿ ಇಂದು (ಡಿ.17) ನಸುಕಿನ ಜಾವ ತೇರದಾಳ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

ಏನಿದು ಪ್ರಕರಣ?

ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ಅಕ್ಟೋಬರ್​ 24ರಂದು ಹನುಮಂತ ದೇವರ ಓಕುಳಿ ಕಾರ್ಯಕ್ರಮವಿತ್ತು. ಹೀಗಾಗಿ, ಅಂದು ಊರಿನಲ್ಲಿ ಆರ್ಕೆಸ್ಟ್ರಾ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಡಲು ಮೈಲಾರಿ ಆಗಮಿಸಿದ್ದ. ಅದೇ ಆರ್ಕೆಸ್ಟ್ರಾದಲ್ಲಿ ಡಾನ್ಸ್ ಮಾಡಲು ಅಪ್ರಾಪ್ತೆ ಕೂಡ ಬಂದಿದ್ದಳು.
ಈ ಸಮಯದಲ್ಲಿ ಅಪ್ರಾಪ್ತೆಯ ಮೇಲೆ ಲಾಡ್ಜ್​ನಲ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 14 ರಂದು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿಸೆಂಬರ್ 15ರಂದು‌ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಯಿತು. ಬಳಿಕ ಬಾಗಲಕೋಟೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಇದೀಗ ಮ್ಯೂಸಿಕ್​ ಮೈಲಾರಿಯನ್ನು ಬಂಧಿಸಲಾಗಿದೆ.
ಅಂದಹಾಗೆ, ಮ್ಯೂಸಿಕ್ ‌ಮೈಲಾರಿ ಉತ್ತರ ಕರ್ನಾಟಕದ ಜನಪದ ಸಿಂಗರ್. ಯೂಟ್ಯೂಬ್​​ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದೇ ಹೆಸರಾಗಿದ್ದಾರೆ. ಈತ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮದ ನಿವಾಸಿ.