ವಿದ್ಯುತ್ ಖಾಸಗೀಕರಣ ವಿರೋಧಿಸಿ ಅಫಜಲಪುರ ತಹಸಿಲ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀಮಂತ ಬಿರಾದಾರ, ಗುರು ಚಾಂದಕವಟೆ, ರಮೇಶ ಪಾಟೀಲ್, ಲತೀಪ್ ಪಟೇಲ್ ಇತರರಿದ್ದರು.
- ಅಫಜಲಪುರದಲ್ಲಿ ಪ್ರಾಂತ ರೈತ ಸಂಘ
- ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಹೋರಾಟ
ಅಫಜಲಪುರ: ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ಪರವಾನಗಿ ಕೋರಿರುವ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ನ ಅರ್ಜಿ ತಿರಸ್ಕರಿಸಬೇಕು. ರೈತರ ಮತ್ತು ನಿಗಮಗಳ ನೌಕರರ ಹಿತ ಕಾಪಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ ವಿರೋಧಿಸಿ ತಹಸಿಲ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಸೋಮವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿ, ಮಂಗಳೂರ, ದುದ್ದಣಗಿಯಲ್ಲಿ ಪಂಪಸೆಟ್ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದರಿಂದ ಜನ-ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗುತ್ತಿದೆ. ಶ್ರೀ ಮರು ಸಂಪರ್ಕ ಮಾಡಬೇಕು. ಮುಂಗಾರು ಬಿತ್ತನೆಗಾಗಿ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಗುರು ಚಾಂದಕವಟೆ, ರಮೇಶ ಪಾಟೀಲ್, ಲತೀಫ್ ಪಟೇಲ್, ಅರ್ಜುನ ಸೋಮಜಾಳ, ಪಾಂಡು ಕುಲಕರ್ಣಿ, ಶ್ರೀಶೈಲ ದುದ್ದಣಗಿ, ಪುಂಡಲೀಕ ಸೋಲಾಪುರ, ಬಸವರಾಜ ಹೆರೂರ, ಚನ್ನವಿರಯ್ಯ ಮಠ, ವಿಠ್ಠಲ್ ಪೂಜಾರಿ, ಶಾಂತುಗೌಡ ಪಾಟೀಲ್, ರಾಮಣ್ಣ ಬಟೋಲಿ, ಶರಣು ನಂದಿಗೌಡ, ಸೋಮು ಪೂಜರಿ, ಶ್ರೀಶೈಲ ಬಾದನಳ್ಳಿ, ಸೋಮಯ್ಯ ಮಠ, ರಾಜು ಬೆನೂರ ಇತರರಿದ್ದರು.