ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆ ಯಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅಪ್ಜಾ ಬಾನು ಅವರು ಸಾರ್ವಜನಿಕರ ದೂರನ್ನು ಆಲಿಸಿದರು.
ಕೊಳ್ಳೇಗಾಲ: ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಗುರುವಾರ ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅಪ್ಜಾ ಬಾನು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ದೂರು ಸಲ್ಲಿಕೆ ಮಾಡಿದರು.
ರೈತ ಮುಖಂಡ ಚಿನ್ನಸ್ವಾಮಿ ಮಾಳಿಗೆ ಮಾತನಾಡಿ, ಸೆಸ್ಕ್ ವತಿಯಿಂದ ನಡೆಸಲಾಗುವ ತ್ರೈಮಾಸಿಕ ನಿರ್ವಹಣಾ ಕಾರ್ಯ ಭಾನುವಾರ ನಡೆಸಿದರೆ ಉತ್ತಮ. ಬೇರೆ ದಿನಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಸುವುದರಿಂದ ವಿದ್ಯುತ್ ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.
ರೈತ ಮುಖಂಡ ನರಸಿಂಹ ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಕೂಡದು. ಇದ್ದರಿಂದ ರೈತರಿಗೆ ಅನ್ಯಾಯವಾಗಲಿದೆ. ಹಾಗಾಗಿ ಸಭೆಯ ರೈತರು ಮಾಡಿದ ಒತ್ತಾಯವನ್ನು ಸರ್ಕಾರ ಗಮನ ಸೆಳೆಯಬೇಕು. ಈ ಬೇಸಿಗೆಯಲ್ಲಿ ರೈತರ ಬೇಡಿಕೆಯಂತೆ ವಿದ್ಯುತ್ ನೀಡಲಾಗಿದೆ. ವಿದ್ಯುತ್ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಕೊಳ್ಳೇಗಾಲ ಪಟ್ಟಣ ದಿನ ದಿನದಿಂದ ಬೆಳೆಯುತ್ತಿದೆ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಇರುವ ಒಂದು 24*7 ವಿದ್ಯುತ್ ಸೇವಾ ವಾಹನ ಸೇವೆ ಸಾಲುತ್ತಿಲ್ಲ. ಹಾಗಾಗಿ ಪಟ್ಟಣಕ್ಕೆ ಮತ್ತೊಂದು ವಾಹನ ಸೇವೆಯನ್ನು ನೀಡಬೇಕು ಎಂದರು.
ಬಳಿಕ ಸೆಸ್ಕ್ ಇಇ ತಬಸ್ಸುಮ್ ಅಪ್ಜಾ ಬಾನು ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಬಂದಂತಹ ಬಂದಿರುವ ದೂರುಗಳನ್ನು ಪರಿಶೀಲಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ಸೆಸ್ಕ್ ಎಇಇ ಸುರೇಶ್ ಕುಮಾರ್, ಸೆಸ್ಕ್ ಅಧಿಕಾರಿ ಸಂತೋಷ್, ಎಸ್.ಕೃಷ್ಣ ಇದ್ದರು.