ರಾಜ್ಯದ ವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಂಘದಿಂದ ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಎಇಇ ಗಣಪತಿ ಮೈನಾಳೆ, ಸಂದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸೂರ್ಯಕಾಂತ ಬಾಳೂಸ್ಕರ್, ತಾಲೂಕು ಅಧ್ಯಕ್ಷ ಅನೀಲಕುಮಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಕ್ಕರಬಾವಿ, ಸಹ ಕಾರ್ಯದರ್ಶಿ ರಾಜಕುಮಾರ ರಟಕಲೆ, ಶಾಖಾ ಅಧಿಕಾರಿಗಳಾದ ಲಿಂಗರಾಜ ಬಿರಾದಾರ, ಮಹೇಶ ಸ್ವಾಮಿ, ಮಹಾದೇವಲಾಲ್ ಹಾಗೂ ಸಿಬ್ಬಂದಿ ಇದ್ದರರು
ಬಸವಕಲ್ಯಾಣ: ರಾಜ್ಯದ ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಂದಿಂದ ಸೋಮವಾರ ಶಾಸಕ ಶರಣು ಸಲಗರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂದ ಪದಾಧಿಕಾರಿಗಳ ನೇತೃತ್ವದ ನಿಯೋಗ ಶಾಸಕರಿಗೆ ಮನವಿ ಸಲ್ಲಿಸಿ, ವಿದ್ಯುತ್ ವಿತರಣೆ ಖಾಸಗೀಕರಣದಿಂದ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿ, ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ. ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಂತೆ ಕೋರಿದರು.
ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.
ಎಇಇ ಗಣಪತಿ ಮೈನಾಳೆ, ಸಂದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸೂರ್ಯಕಾಂತ ಬಾಳೂಸ್ಕರ್, ತಾಲೂಕು ಅಧ್ಯಕ್ಷ ಅನೀಲಕುಮಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಕ್ಕರಬಾವಿ, ಸಹ ಕಾರ್ಯದರ್ಶಿ ರಾಜಕುಮಾರ ರಟಕಲೆ, ಶಾಖಾ ಅಧಿಕಾರಿಗಳಾದ ಲಿಂಗರಾಜ ಬಿರಾದಾರ, ಮಹೇಶ ಸ್ವಾಮಿ, ಮಹಾದೇವಲಾಲ್ ಹಾಗೂ ಜೆಸ್ಕಾಂ ಎಲ್ಲ ವಿಭಾಗದ ಸಿಬ್ಬಂದಿ ನಿಯೋಗದಲ್ಲಿದ್ದರು.