ರೇಷ್ಮೆ ಬೀಜೋತ್ಪಾದಕರಿಗಿಲ್ಲ ಆಸರೆ silk 
ರಾಜ್ಯ

ರೇಷ್ಮೆ ಬೀಜೋತ್ಪಾದಕರಿಗಿಲ್ಲ ಆಸರೆ. silk

ಕೋಲಾರ ಡೆಸ್ಕ್
ಕೋಲಾರ: ರೇಷ್ಮೆ ಬೀಜೋತ್ಪಾದನಾ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡದೆ ಕಡೆಗಣಿಸಿದ್ದು, ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ. silk.
ರೇಷ್ಮೆ ಹುಳುಗಳ ಮೊಟ್ಟೆ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ತೊಡಗಿದ ರೈತರಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಬೀಜೋತ್ಪಾದನಾ ರೇಷ್ಮೆ ಮಂಡಳಿ ವಹಿಸಿಕೊಂಡಿದೆ. ಆದರೆ ಇದುವರೆಗೂ ಸೌಲಭ್ಯ ಕಲ್ಪಿಸುವಲ್ಲಿ ವಿಲವಾಗಿದೆ ಎಂಬುದು ರೈತರ ಆರೋಪ.
ಕೋಲಾರ ಜಿಲ್ಲೆಯು ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ಹೆಚ್ಚು ರೈತರು ಒಲವು ತೋರುತ್ತಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೆರಳೆ ಬೆಳೆದಿದ್ದು, 19,209 ಬೆಳೆಗಾರರಿದ್ದಾರೆ. ಆ ಪೈಕಿ ಕೋಲಾರ, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಸುಮಾರು 200 ರಿಂದ 250 ಮಂದಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಮುಖವಾಗಿ ಮಿಶ್ರತಳಿ, ದ್ವಿತಳಿ ಗೂಡು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಮೊಟ್ಟೆ ಉತ್ಪಾದನೆ ಮಾಡುವವರ ಸಂಖ್ಯೆ ತೀರಾ ಕಡಿಮೆಯಿದೆ.
ರೇಷ್ಮೆ ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೀಜೋತ್ಪಾದನೆ ಮಾಡಲು ತರಬೇತಿ ನೀಡುವ ಮೂಲಕ ಸರ್ಕಾರಗಳಿಂದ ದೊರೆಯುವ ಸಮಸ್ಯೆಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ ಹೊರತು ಬೇಕಿರುವ ಔಷಧ ಸೇರಿ ಸೌಲಭ್ಯ ನೀಡುವಲ್ಲಿ ಮುಂದಾಗುತ್ತಿಲ್ಲ. ಈಗ ಕೇಂದ್ರ ಸರ್ಕಾರದ ಸೌಲಭ್ಯ ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರವೂ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದೆ. ಇದು ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ದೊರೆಯದ ಸಲಕರಣೆ: ರೇಷ್ಮೆ ಗೂಡು ಬೆಳೆಯುತ್ತಿದ್ದವರನ್ನು ರೇಷ್ಮೆ ಬೀಜೋತ್ಪಾದನೆಗೆ ಉತ್ತೇಜನ ನೀಡಲಾಯಿತು. ಬೀಜೋತ್ಪಾದರು ಮೈಸೂರು, ರಾಮನಗರ, ವಿಜಯಪುರ, ಚಿಂತಾಮಣಿಯಿಂದ ಚಾಕಿ ಖರೀದಿ ಮಾಡಿಕೊಂಡು ಬರುತ್ತಿದ್ದು, 100 ಮಟ್ಟಿ ಚಾಕಿ ಹುಳು ಖರೀದಿಗೆ 1,500 ರೂ. ವೆಚ್ಚ ತಗಲುತ್ತದೆ. ಜಿಲ್ಲೆಯ ರೈತರು ಎ್ಸಿ-1, ಎ್ಸಿ-2 ತಳಿಯ 200 ಮಟ್ಟಿಯಿಂದ 300 ಮಟ್ಟಿ ತನಕ ಬೆಳೆಯುತ್ತಾರೆ. 100 ಮಟ್ಟಿಗೆ ಗುಣಮಟ್ಟದ ಇಳುವರಿ ಬಂದರೆ 50 ರಿಂದ 80 ಕೆಜಿ ಹಾಗೂ 300 ಮಟ್ಟಿಗೆ 230 ರಿಂದ 250 ಕೆಜಿ ಗೂಡು ಉತ್ಪಾದನೆಯಾಗುತ್ತದೆ. ಇದಕ್ಕೂ ಪ್ರತಿ ಕೆಜಿಗೆ 1000 ರೂ.ನಿಂದ 1,300 ರೂ.ವರೆಗೆ ಬೆಲೆಯಿದೆ. ಆದರೆ ಬೆಳೆ ನಿರ್ವಹಣೆಗೆ ಪ್ರೋತ್ಸಾಹ ದೊರೆಯುತ್ತಿಲ್ಲ.
ರೋಗ ನಿಯಂತ್ರಣಕ್ಕೆ ತೊಡಕು : ಹವಾಮಾನ ವೈಪರೀತ್ಯದಿಂದ ಎದುರಾಗುವ ರೋಗಬಾಧೆ ನಿಯಂತ್ರಿಸಲು ವಿಜ್ಞಾನಿಗಳು, ತಜ್ಞರು ಶಿಾರಸು ಮಾಡಿದ ಔಷಧವನ್ನೇ ಸಿಂಪಡಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಹಿಪ್ಪು ನೆರಳೆ ಸೊಪ್ಪಿಗೆ ನುಸಿ ರೋಗ, ಸುಳಿ ತಿನ್ನುವ ಹುಳು ಬಾಧೆ, ಬೂದು ರೋಗ ಹರಡುವ ಸಾಧ್ಯತೆ ಇದೆ. ಆದರೆ, ಇದರ ನಿಯಂತ್ರಣಕ್ಕೆ ತುರ್ತಾಗಿ ಔಷಧ ಸಿಂಪಡಣೆ ಮಾಡಬೇಕಾಗಿದೆ. ಈ ವೇಳೆ ಹುಳು ಸಾಕಣೆ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ರೋಗ ನಿಯಂತ್ರಣ ಔಷಧ ಲಭ್ಯವಾಗದಿರುವುದು ರೈತರಲ್ಲಿ ಆತಂಕ ಎದುರಾಗಿದೆ.
ಬೀಜೋತ್ಪಾದನೆ ಉದ್ದೇಶವೇನು?
- ರೋಗಮುಕ್ತ ಗುಣಮಟ್ಟದ ಮೊಟ್ಟೆ ಉತ್ಪಾದನೆ
- ಉತ್ತಮ ಗೂಡಿನ ಇಳುವರಿ ಪಡೆಯಲು ಮತ್ತು ಉದ್ಯಮದ ಸ್ಥಿರತೆ ಖಚಿತಪಡಿಸಿಕೊಳ್ಳಲು ಸಾಧ್ಯ
- ರೋಗಮುಕ್ತ ಮೊಟ್ಟೆಗಳ ಉತ್ಪಾದನೆ ರೇಷ್ಮೆ ಕೃಷಿಯ ಬಲವರ್ಧನೆ
- ರೇಷ್ಮೆ ಬೀಜೋತ್ಪಾದನೆ, ರೇಷ್ಮೆ ಕೃಷಿ ಉದ್ಯಮದ ಸ್ಥಿರತೆ
- ರೈತರ ಆರ್ಥಿಕ ಸ್ಥಿತಿ ಸುಧಾರಣೆ, ಹೊಸ ಉದ್ಯೋಗಾವಕಾಶ ಸೃಷ್ಟಿ
ರೇಷ್ಮೆ ಬೆಳೆಗಾರರಿಗೆ ಅಗತ್ಯವಾಗಿ ಬೇಕಾಗಿರುವ ಔಷಧ ಲಭ್ಯವಿದ್ದು, ಮಾರುಕಟ್ಟೆಗೆ ಗೂಡು ತರುವ ರೈತರಿಗೆ ವಾರಕ್ಕೆ ಒಮ್ಮೆ ವಿತರಿಸಲಾಗುತ್ತಿದೆ. ಬೀಜೋತ್ಪಾದಕ ರೈತರಿಗೂ ಮೊಟ್ಟೆಯಿಂದ ಹಿಡಿದು ಬೆಳೆ ನಿರ್ವಹಣೆಗೆ ಬೇಕಾಗಿರುವ ಸಲಕರಣೆ ನೀಡಲಾಗುತ್ತಿದೆ.
ಆಂಜನೇಯ ರೆಡ್ಡಿ
ಉಪನಿರ್ದೇಶಕ, ರೇಷ್ಮೆ ಕೃಷಿ ಇಲಾಖೆ, ಕೋಲಾರ
ರೈತರಿಗೆ ಬೇಕಾಗಿರುವ ಸಲಕರಣೆ ಸರಬರಾಜು ಮಾಡುವಂತೆ ಬೀಜೋತ್ಪದನೆಗೆ ಕೇಂದ್ರ ಮಂಡಳಿಗೆ ಬೇಡಿಕೆ ಇಟ್ಟರೂ ಇದುವರೆಗೆ ಕಲ್ಪಿಸಿಲ್ಲ. ಕೇಳಿದರೆ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಸಂಪೂರ್ಣ ವಿಲವಾಗಿದೆ.
ಮಂಜುನಾಥ್‌ಗೌಡ
ಬೀಜೋತ್ಪಾದನ ರೇಷ್ಮೆ ಬೆಳೆಗಾರ, ತೊರಗನದೊಡ್ಡಿ