ಬಾಗಲಕೋಟೆ ಜಿಲ್ಲಾಽಕಾರಿ ಸಭಾಂಗಣದಲ್ಲಿ ಜಿಲ್ಲಾಽಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಕುರಿತ ಸಭೆ ಜರುಗಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಽಕಾರಿಗಳು ಇದ್ದರು.
ಬಾಗಲಕೋಟೆ: ಜಿಲ್ಲೆಯಲ್ಲಿ ಜನೆವರಿಯಿಂದ ಜೂನ್ ವರೆಗೂ ವಾಡಿಕೆ ಮಳೆ ೯೩.೮ ಎಂಎA ಇದ್ದು, ೧೦೧ ಎಂಎA ಮಳೆ ಆಗಿದೆ. ಬಾದಾಮಿ, ಮುಧೋಳ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹೆಚ್ಚಿಗೆ ಮಳೆ ಆಗಿದೆ. ಸದ್ಯ ಕಬ್ಬು ಸೇರಿದಂತೆ ಒಟ್ಟು ೮೫ ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಇನ್ನೂ ಬಿತ್ತನೆ ಮಾಡದೇ ಇರುವ ರೈತರು ಸಮರ್ಪಕ ಮಳೆ ಆಗದೇ ಬಿತ್ತನೆಗೆ ಮುಂದಾಗಬಾರದು ಎಂದು ಜಿಲ್ಲಾಽಕಾರಿ ಸಂಗಪ್ಪ ಸಲಹೆ ನೀಡಿದರು.
ಜಿಲ್ಲಾಽಕಾರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಸಮರ್ಪಕವಾಗಿ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೀಜ ಹಾಗೂ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಅಗತ್ಯ ದಾಸ್ತಾನು ಲಭ್ಯವಿರುತ್ತದೆ. ವಿವಿಧ ಬಿತ್ತನೆ ಬೀಜಗಳಿಗೆ ೭೧೨೮ ಕ್ವಿಂಟಲ್ ಬೇಡಿಕೆ ಇದ್ದು, ಈ ಪೈಕಿ ೩೫೮೦ ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದೆ. ೧೩೧೯ ಕ್ವಿಂಟಲ್‌ನಷ್ಟು ವಿತರಣೆ ಮಾಡಲಾಗಿದೆ. ೨೨೬೧ ಕ್ವಿಂಟಲ್‌ನಷ್ಟು ಇದೆ. ವಿವಿಧ ರಸಗೊಬ್ಬರ ಸೇರಿ ಒಟ್ಟು ೫೫೭೧೧ ಮೆ.ಟನ್ ಬೇಡಿಕೆ ಪೈಕಿ ೨೬೪೬೩ ಮೆ.ಟನ್ ಹಂಚಿಕೆಯಾಗಿದೆ ಎಂದು ಅಽಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಽಕಾರಿಗಳು, ಆರ್.ಎಸ್.ಕೆ.ಗಳಲ್ಲಿ ರೈತರಿಗೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮಕೈಗೊಳ್ಳಬೇಕು. ಯಾವ ಯಾವ ಬೆಳೆಗೆ ಯಾವ ಯಾವ ಗೊಬ್ಬರವನ್ನ ಎಷ್ಟು ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಬೋರ್ಡ ಹಾಕಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ನಿಗದಿತ ದರದಲ್ಲಿಯೇ ವಿತರಣೆ ಮಾಡಬೇಕು. ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರ ವಸೂಲಿ ಮಾಡುವುದು ಅಥವಾ ಕಳಪೆ ಗುಣಮಟ್ಟದ ಕೃಷಿ ಪರಿಕಗಳನ್ನು ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ತಾಲೂಕಾ ಮಟ್ಟದ ಅಽಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಿ, ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕೆಂದರು.
ರಸಗೊಬ್ಬರ ಸರಬರಾಜು ಮಾಡುತ್ತಿರುವ ಇಪ್ಕೋ, ಐಪಿಸಿ ಹಾಗೂ ಸಿಐಎಲ್ ಕಂಪನಿಗಳು ರೈಲ್ವೆ ಮೂಲಕ ಬಾಗಲಕೋಟೆಯಲ್ಲಿ ರಸಗೊಬ್ಬರ ಇಳಿಸದೇ ವಿಜಯಪುರದಲ್ಲಿ ಇಳಿಸುತ್ತಿರುವದರಿಂದ ಅಲ್ಲಿಂದ ತಾಲೂಕಾವಾರು ಸರಬರಾಜಿಗೆ ತೊಂದರೆಯಾಗಿದೆ ಎಂದು ಅಽಕಾರಿಗಳು ಸಭೆಯ ಗಮನಕ್ಕೆ ತಂದರು. ಬಾಗಲಕೋಟೆ ಮೂಲಕವೇ ವಿಜಯಪುರಕ್ಕೆ ಗೂಡ್ಸ್ ರೈಲು ಹೋಗುತ್ತಿರುವುದರಿಂದ ಬಾಗಲಕೋಟೆಯಲ್ಲಿ ಗೊಬ್ಬರ ಇಳಿಸಲು ಕ್ರಮಕೈಗೊಳ್ಳಲು ವಿವಿಧ ಕಂಪನಿ ಪ್ರತಿನಿಽಗಳಿಗೆ ಸೂಚನೆ ನೀಡಿದ ಜಿಲ್ಲಾಽಕಾರಿಗಳು, ಈ ಸಂದರ್ಭದಲ್ಲಿ ಖೇತ ಬಚಾವೋ ಅಭಿಯಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಎಂ.ಕೋರೆ, ಜಮಖಂಡಿ ವಿಭಾಗದ ಕೃಷಿ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಮಾರ್ಕೆಟಿಂಗ್ ಫೆಡರೇಷನ್ ಅಽಕಾರಿ ಸುಪ್ರಿಯಾ ಸೇರಿದಂತೆ ಆಯಾ ತಾಲೂಕಿ ಕೃಷಿ ಅಽಕಾರಿಗಳು ಹಾಗೂ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಗಳು ಉಪಸ್ಥಿತರಿದ್ದರು.
ಇದೇ ವೇಳೆ ತೋಟಗಾರಿಕೆ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ವಸಂತ ಗಾಣಗೇರ ಅವರು ವಿವಿಧ ಬೆಳೆಯ ತಳಿಗಳ ಬಗ್ಗೆ ಮಾಹಿತಿ ನೀಡಿ, ಮಳೆ ವಿಳಂಬವಾದಲ್ಲಿ ಪರ್ಯಾಯ ಯೋಜನೆಯಲ್ಲಿ ತಿಳಿಸಿದ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.