ನಿವೃತ್ತಿ ನೌಕರರ ಅನುದಾನಕ್ಕೆ ಕಡಿತ ಸಲ್ಲ employees 
ರಾಜ್ಯ

ನಿವೃತ್ತಿ ನೌಕರರ ಅನುದಾನಕ್ಕೆ ಕಡಿತ ಸಲ್ಲ employees

ಮುಳಬಾಗಿಲು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ನಗರದ ತಾಲೂಕು ಕಚೇರಿ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್​ ಶ್ರೀಕುಮಾರ್​ ಅವರಿಗೆ ಮನವಿ ಸಲ್ಲಿಸಿದರು.employees
ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಜನಾರ್ದನ್​ ಮಾತನಾಡಿ, ಸರ್ಕಾರದ ಕೆಲಸ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಕೇಂದ್ರ ಸರ್ಕಾರ ನಿವೃತ್ತಿ ನೌಕರರ ಅನುದಾನ ಕಡಿತ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ. ನಿವೃತ್ತ ಪಿಂಚಣಿದಾರರಿಗೆ ವಾರ್ಷಿಕ 2 ಬಾರಿ ನೀಡುತ್ತಿರುವ ತುಟ್ಟಿ ಭತ್ಯೆ ಮತ್ತು ವೇತನ ಆಯೋಗದಲ್ಲಿ ಯಾವುದೇ ಆರ್ಥಿಕ ಸೌಲಭ್ಯ ನೀಡದಿರುವುದು ಖಂಡನೀಯ. ನಿವೃತ್ತರನ್ನು ಕಡೆಗಣಿಸುವುದು ಸರಿಯಲ್ಲ. ಸಮಾಜದ ಒಳಿತಿಗಾಗಿ ಶ್ರಮಿಸಿದ್ದು, ಅವರ ಸೌಲಭ್ಯಗಳಿಗೆ ಕತ್ತರಿ ಹಾಕಬಾರದು ಎಂದರು.
ನಗರದ ಸರ್ಕಾರಿ ನೌಕರರ ಭವನದಿಂದ ಕೆಇಬಿ ವೃತ್ತದ ಮೂಲಕ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಮೆರವಣಿಗೆ ನಡೆಸಿದರು.
ಸಂಘಟನಾ ಕಾರ್ಯದರ್ಶಿಗಳಾದ ಯಾನಾದಹಳ್ಳಿ ನಾರಾಯಣಸ್ವಾಮಿ, ಎಂ.ಸುಬ್ಬರಾಯಪ್ಪ, ಜಂಟಿ ಕಾರ್ಯದರ್ಶಿಗಳಾದ ಎಲ್​.ಶಿವಣ್ಣ, ಜಿ.ವೆಂಕಟರಾಮರೆಡ್ಡಿ, ಸಾಂಸತಿಕ ಕಾರ್ಯದರ್ಶಿ ಜಮ್ಮನಹಳ್ಳಿ ವೆಂಕಟೇಶ್​, ಪದಾಧಿಕಾರಿಗಳಾದ ನಿವೃತ್ತ ಪೊಲೀಸ್​ ಅಧಿಕಾರಿಗಳಾದ ವೆಂಕಟರಮಣಪ್ಪ, ನಾಗರಾಜ್​, ನಾಗಭೂಷಣಂ, ನಿವೃತ್ತ ಶಿಕ್ಷಕರಾದ ಎಂ.ಚಂಗಲರಾಯಪ್ಪ, ಚಾನ್​ ಪಾಷ, ಸಿದ್ದಲಿಂಗಯ್ಯ, ಬಿ.ನಾರಾಯಣಪ್ಪ, ಸರೋಜಮ್ಮ, ಪಾರ್ವತಮ್ಮ, ಉತ್ತನೂರು ಶ್ರೀನಿವಾಸ ಭಟ್ಟರು ಇತರರು ಇದ್ದರು.