ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿ ಹೆಸರು ಬಿತ್ತನೆ ಮಾಡಿದ್ದು ಮಳೆ ಇಲ್ಲದೆ ಬೆಳೆ ಒಣಗುತ್ತಿರುವುದು.
- ಗುರುಮಠಕಲ್‌ನಲ್ಲಿ ಶೇ.೬೫ ಬಿತ್ತನೆ
- ವರುಣನಿಗಾಗಿ ಬಕಪಕ್ಷಿಯಂತೆ ಕಾಯುತ್ತಿರುವ ರೈತರು
ಗುರುಮಠಕಲ್ : ಪ್ರಸಕ್ತ ಸಾಲಿನ ಮುಂಗಾರು ಸಂಪೂರ್ಣ ಕೈಗೊಂಡಿದ್ದರಿAದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಕೆಲವಡೆ ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ಇನ್ನೂ ಕೆಲ ರೈತರು ಬಿತ್ತನೆ ಮಾಡದೆ ಮಳೆಯ ನಿರೀಕ್ಷೆಯಲ್ಲಿ ಕಾಯುವಂತಾಗಿದೆ.
ಮುAಗಾರಿನಲ್ಲಿ ಉತ್ತಮ ಮಳೆಯಾಗಿದ್ದರೆ ಈವರೆಗೆ ರೈತರ ಮೊಗದಲ್ಲಿ ಸಂತಸ ಕಂಡು ಬರುತ್ತಿತ್ತು, ಆದರೆ ಈಗ ಮಳೆ ಇಲ್ಲದೆ ರೈತರು ಆಗಸದತ್ತ ಮುಖ ಮಾಡಿದ್ದಾರೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ರೈತರು ಚಿಂತಿಗೀಡಾಗಿದ್ದಾರೆ. ತಾಲೂಕಿನಲ್ಲಿ ಜೂ.ಆರಂಭದಿAದ ೧೬೨ ಮಿಮೀ ಮಳೆಯಾಗಬೇಕಿತ್ತು. ಆದರೆ ಈವರೆಗೆ ಕೇವಲ ೭೦ ಮಿಮೀ ಮಳೆಯಾಗಿದ್ದು, ಶೇ.೫೭ ಮಳೆ ಕೊರೆತೆ ಎದುರಾಗಿದೆ. ಹಾಗಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ೫೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ೩೩ ಸಾವಿರ ಹೆಕ್ಟೇರ್ ಶೇ.೬೫ ಮಾತ್ರ ಬಿತ್ತನೆ ಮಾಡಲಾಗಿದೆ. ಹೆಸರು, ಉದ್ದು ಬೆಳೆದರೆ ರೈತರ ಕೃಷಿ ಖರ್ಚಿಗೆ ಆಸರೆಯಾಗುತ್ತದೆ. ಹಾಗಾಗಿ ಹೆಸರು, ಉದ್ದನ್ನು ಮುಂಗಾರಿನ ಆರಂಭದಲ್ಲೇ ಬಿತ್ತನೆ ಮಾಡಿದ್ದರು. ಆದರೆ ಕೈಕೊಟ್ಟ ಮಳೆಯಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಕಾಲಕ್ಕೆ ಮಳೆಯಾಗದಿರುವುದು ಬಿತ್ತಿದ ತೊಗರಿ, ಹೆಸರು ಭೂಮಿ ಪಾಲಾಯ್ತು. ಮರಳಿ ಬಿತ್ತಲು ಮತ್ತೆ ಖರ್ಚು ಮಾಡುವಂತಾಗಿದೆ. ಹತ್ತಿ ನಾಟಿ ಮಾಡಬೇಕೆ ಎನ್ನುವ ಚಿಂತೆಯಲ್ಲಿದ್ದೇವೆ ಎಂದು ರೈತ ಹುಸೇನಪ್ಪ ತಮ್ಮ ಅಳಲು ತೋಡಿಕೊಂಡರು.
"
ಪ್ರಸಕ್ತ ಸಾಲಿನಲ್ಲಿ ಮಳೆ ಕೊರೆತೆಯಿಂದ ರೈತರು ಶೇ.೬೫ ಮಾತ್ರ ಬಿತ್ತನೆ ಮಾಡಿದ್ದಾರೆ. ಈಗಾಗಲೇ ಬೆಳೆ ವಿಮೆ ಮಾಡಿಸಿಕೊಳ್ಳು ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಹೆಚ್ಚಿನ ರೈತರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಬಿತ್ತನೆ ಬೀಜಗಳ ಕೊರತೆ ಇಲ್ಲ.| ಮಲ್ಲಿಕಾರ್ಜುನ ವಾರದ್ಕೃಷಿ ಅಽಕಾರಿ ಗುರುಮಠಕಲ್