ತೋಟದ ಮನೆಗಳಿಗೆ ವಿದ್ಯುತ್​ ನೀಡುವುದು ಕಡಿತಗೊಳಿಸುವ ನಿರ್ಧಾರ ಖಂಡಿಸಿ ಸೇಡಂ ಜೆಸ್ಕಾಂ ಕಚೇರಿ ಎದುರ ರೈತ ಸಂ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಶಾಂತಕುಮಾರ ಚನ್ನಕ್ಕಿ, ರವಿ ಪಾಟೀಲ್​ ಸೂರವಾರ, ಅಮಶೆಟ್ಟಿ ಪಾಟೀಲ್​, ಅಮರ ಪಾಟೀಲ್​ ಸೇರಿದಂತೆ ಇನ್ನಿತರರಿದ್ದರು.  
ರಾಜ್ಯ

ತೋಟದ ಮನೆಗಳಿಗೆ ವಿದ್ಯುತ್​ ಕಡಿತ ಬೇಡ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸೇಡಂ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ರೈತ ಸಂಘದಿಂದ ಪ್ರತಿಭಟನೆ
ಸೇಡಂ: ಸರ್ಕಾರ ವಿದ್ಯುತ್​ ಉಳಿತಾಯದ ನೆಪದಲ್ಲಿ ತೋಟದ ಮನೆಗಳಿಗೆ ವಿದ್ಯುತ್​ ಸರಬರಾಜಿನಲ್ಲಿ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವದು ಖಂಡನಾರ್ಹವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ದೂರಿದರು.
ರೈತರ ತೋಟದ ಮನೆಗೆ ನೀಡಲಾಗುತ್ತಿದ್ದ ಸಿಂಗಲ್​ ಫೇಸ್​ ವಿದ್ಯುತ್​ ಸರಬರಾಜಿನಲ್ಲಿ ಕಡಿತಗೊಳಿಸುವ ನಿರ್ಧಾರ ಖಂಡಿಸಿ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ, ವಿಧಾನಸೌಧ ಸೇರಿ ರಾಜ್ಯದ ಎಲ್ಲ ಕಚೇರಿಗಳಲ್ಲಿನ ಎಸಿ, ಫ್ಯಾನ್​ ಬಳಕೆ ನಿಲ್ಲಿಸುವ ಮೂಲಕ ವಿದ್ಯುತ್​ ಉಳಿತಾಯ ಮಾಡಿ ರೈತರಿಗೆ ನೀಡುವ ಕೆಲಸ ಆಗಬೇಕು. ರಾಜ್ಯ ಸರ್ಕಾರ ರ್ನಿದಿಷ್ಟ ಅವಧಿಗೆ ತ್ರೀ ಫೇಸ್​ ವಿದ್ಯುತ್​ ನೀಡಿ ಉಳಿದ ಸಮಯದಲ್ಲಿ ಸಿಂಗಲ್​ ಫೇಸ್​ ನೀಡಬೇಕಿತ್ತು. ಆದರೆ ರೈತರಿಗೆ ನೀಡುತ್ತಿದ್ದ ಸಿಂಗಲ್​ ಫೇಸ್​ ಕಡಿತಗೊಳಿಸಲಾಗಿದೆ. ಇದರಿಂದ ತೋಟದ ಮನೆಯಲ್ಲಿನ ರೈತರು ಕತ್ತಲಲ್ಲಿ ವಾಸಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಜೆಸ್ಕಾಂ ಇಇ ಪರಮೇಶ್ವರ ಸ್ಥಳಕ್ಕೆ ಆಗಮಿಸಿ, ಅಧಿಕ್ಷಕ ಇಂಜಿನಿಯರ್​ ಅವರಿಗೆ ವಿಡಿಯೋ ಕರೆಯ ಮೂಲಕ ರೈತರೊಂದಿಗೆ ಮಾತನಾಡಿಸಿದರು. ಬರುವ 30ನೇ ತಾರೀಖಿನವರೆಗೆ ಪ್ರಸ್ತುತ ಸ್ಥಿತಿ ಮುಂದುವರೆಯಲಿದೆ. ನಂತರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಪ್ರಮುಖರಾದ ರವಿ ಪಾಟೀಲ್​ ಸೂರವಾರ, ಆಮಶೆಟ್ಟಿ ಪಾಟೀಲ್​, ಮನೋಹರರೆಡ್ಡಿ ಬಟಗೇರಾ, ಭೀಮರಾಯ ಮಾಲಿಪಾಟೀಲ್​, ಚಂದ್ರಕಾಂತ ತೊಟ್ನಳ್ಳಿ, ಅಮರ ಪಾಟೀಲ್​, ಚಂದ್ರು ಗುತ್ತೇದಾರ, ಭೀಮರಾಯ ಬಟಗೇರಾ, ಕಾಶಪ್ಪ ಆಡಕಿ ಸೇರಿದಂತೆ ಇನ್ನಿತರರಿದ್ದರು.