ನೆಲಮಂಗಲ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ನೆಲಮಂಗಲ ಉತ್ಸವ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಲು ಶಾಸಕ ಎನ್​.ಶ್ರೀನಿವಾಸ್​ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಂಜುನಾಥ್​ ಗೌಡ, ಉಪಾಧ್ಯಕ್ಷ ಸಿ.ಎಂ.ಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಉದ್ಯಮಿ ಚಿಕ್ಕಹನುಮೇಗೌಡ ಇತರರು ಇದ್ದರು. 
ರಾಜ್ಯ

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಬಳಿಕ ಪಕ್ಷಾತಿತ, ಜಾತ್ಯತಿತವಾಗಿ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ಉದ್ದೇಶದಿಂದಲೇ 2.5 ವರ್ಷದಲ್ಲಿ ಒಂದೂವರೆ ಸಾವಿರ ಕೋಟಿ ರೂ.ಕ್ಕಿಂತ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು.
ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ನೆಲಮಂಗಲ ಉತ್ಸವ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ವೇಳೆ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳನ್ನು ಬಹುತೇಕ ಹಂತ ಹಂತವಾಗಿ ಪೂರೈಸಲಾಗುತ್ತಿದೆ.
ಮನೆಗೆ ಐದು ಗ್ಯಾರಂಟಿ, ಮನೆಗೊಂದು ರಂಗೋಲಿ ಎಂಬ ಶೀರ್ಷಿಕೆಯಡಿ ಕ್ಷೇತ್ರದಾದ್ಯಂತ ರಂಗೋಲಿ ಸ್ಪರ್ಧೆ ಆಯೋಜಿಸುತ್ತಿದ್ದು, ಬಹುತೇಕ ಗ್ರಾಪಂಗಳಲ್ಲಿ ಮುಕ್ತಾಯಗೊಂಡಿದೆ. ಮಹಿಳೆಯರು ರಂಗೋಲಿ ಮೂಲಕ ಗ್ರಾಮದ ಸಮಸ್ಯೆ ಗಮನಕ್ಕೆ ತಂದಿದ್ದು, ಅವುಗಳನ್ನು ಬಗೆಹರಿಸಲಾಗುವುದು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯ ಮಹಂತೇಶ್​, ಮಂಜುನಾಥಯ್ಯ, ಡಿ.ಚಿಕ್ಕಣ್ಣ, ಪವಿತ್ರಾ ಚಿಕ್ಕಹನುಮೇಗೌಡ, ವಕೀಲ ರವಿಕುಮಾರ್​, ಮುಖಂಡ ಭೂಸಂದ್ರಚಿಕ್ಕಣ್ಣ, ಜಯರಾಮ್​, ಗುರುಡರಂಗಪ್ಪ, ಮುನಿಕೃಷ್ಣಪ್ಪ, ಚನ್ನಬಸಪ್ಪ ಇದ್ದರು.
ಅದ್ದೂರಿ ಸ್ವಾಗತ : ರಂಗೋಲಿ ಸ್ಪರ್ಧೆ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದ ಶಾಸಕ ಎನ್​.ಶ್ರೀನಿವಾಸ್​ ಅವರಿಗೆ ಬೆಂಬಲಿಗರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ದೊಡ್ಡಕರೇನಹಳ್ಳಿ ಗ್ರಾಮದಲ್ಲಿ ಉದ್ಯಮಿ ಚಿಕ್ಕಹನುಮೇಗೌಡ, ಶಾಸಕ ಎನ್​.ಶ್ರೀನಿವಾಸ್​ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಜತೆ ಇರುವ ೋಟೋ ನೀಡಿದ್ದು ವಿಶೇಷವಾಗಿತ್ತು.
ಬಹುಮಾನ ವಿತರಣೆ : ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾವಿಕೆರೆ, ಚಿಕ್ಕಮಾರನಹಳ್ಳಿ, ಭೂಸಂದ್ರ, ಮಹದೇವಪುರ, ಯಂಟಗಾನಹಳ್ಳಿ, ದೊಡ್ಡಕರೇನಹಳ್ಳಿ, ಕೊರಟಗೆರೆ, ಹೊನ್ನಸಂದ್ರ, ಭಟ್ಟರಹಳ್ಳಿ, ಹಂಚೀಪುರ, ಕೋಡಪ್ಪನಹಳ್ಳಿ, ಕುಲುಮೆಕೆಂಪಲಿಂಗನಹಳ್ಳಿ, ಮಲ್ಲರಬಾಣವಾಡಿ, ಶಾಂತಿನಗರ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.