ಲೇಬಲ್ ಹಾಕಿಕೊಳ್ಳೋರಿಗೆ ಅವಕಾಶ ಕೊಡಲ್ಲ label
- ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ
- ಅಭಿವೃದ್ಧಿಯಲ್ಲಿ ಗೊಂದಲಗಳಿಂದ ಮುಕ್ತಿ
ಬಂಗಾರಪೇಟೆ: ತಾಲೂಕಿನ ಕೆಸರನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಂಗನೂರು ಗ್ರಾಮದಲ್ಲಿ ಅಭಿವೃದ್ಧಿ ಮಾಡುವವರು ಒಬ್ಬರಾದರೆ ಅದಕ್ಕೆ ಲೇಬಲ್ ಹಾಕಿಕೊಳ್ಳೊರು ಮತ್ತೊಬ್ಬರು. ಈ ಬಾರಿ ಅಂತಹ ಗೊಂದಲಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.label
ತಾಲೂಕಿನ ಬೆಂಗನೂರು ಗ್ರಾಮದಲ್ಲಿ 1.28 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ನಗರಕ್ಕೆ ಹೊಂದಿಕೊಂಡಿದ್ದರೂ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದಿದೆ. ಗ್ರಾಮಸ್ಥರ ಬೇಡಿಕೆಯಂತೆ ಅಧಿಕಾರ ಅವಧಿಯಲ್ಲಿ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದೇನೆ. ಬರೀ ಮಾತಿನಲ್ಲೇ ಮನೆ ಕಟ್ಟುವ ಶಾಸಕ ನಾನಂತೂ ಅಲ್ಲ. ಅವಶ್ಯ ಇರುವ ಎಲ್ಲ ಅನುಕೂಲಗಳನ್ನು ಗ್ರಾಮಕ್ಕೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕೆಸರನಹಳ್ಳಿ ಪಂಚಾಯಿತಿಯಲ್ಲಿ ಯಾರಿಗೆಲ್ಲಾ ಮನೆ ಇಲ್ಲವೋ ಅಂತಹವರಿಗೆ ನಿವೇಶನ ವಿತರಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 5 ಗ್ಯಾರಂಟಿ ಘೋಷಣೆ ಮಾಡಿದಂತೆ ಜಾರಿ ಮಾಡಲಾಗಿದೆ. ಕೆಲವರು ಟೀಕೆ ಮಾಡಿದ್ದರೂ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು ಟೀಕೆಕಾರರ ಬಾಯಿ ಮುಚ್ಚಿಸಿದೆ. ಈ ಹಿಂದೆ ಇದ್ದಂತ ಶಾಸಕರು ಅಭಿವೃದ್ಧಿ ಮಾಡಿಲ್ಲ. ಮಾಡುವವರನ್ನು ಟೀಕೆ ಮಾಡಿ ಜನರನ್ನು ದಾರಿ ತಪ್ಪಿಸುವರಿದ್ದಾರೆ ಎಂದರು.
ರೌಡಿಸಂ ಮಾಡಿ ಬೆದರಿಕೆ ಹಾಕುವ ಕಾಲ ಮಾಯವಾಗಿದೆ. ನ್ಯಾಯಕ್ಕೆ, ಧರ್ಮಕ್ಕೆ ನಿಮ್ಮ ಪರ ನಾನಿರುವೆ. ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಈ ಬಾರಿಯ ಬಜೆಟ್ನಲ್ಲಿ ಬಂಗಾರಪೇಟೆ ಕ್ಷೇತ್ರಕ್ಕೆ ಐಟಿಐ ಬೇಕೆಂದು ಮುಖ್ಯಮಂತ್ರಿಯನ್ನು ಕೇಳಲಾಗಿದೆ. ದೊರತೆರೆ ಕೆಸರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದರು.