ಕೆಂಭಾವಿ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಪ್ರಸಕ್ತ ಸಾಲಿನಲ್ಲಿ ಬೇಸಿಗೆ ರಜೆ ತರಗತಿ ನಡೆಸುವುದಿಲ್ಲ ಎಂದು ೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಪತ್ರವನ್ನು ಮಂಗಳವಾರ ಸಿಆರ್ಪಿ ಸಲ್ಲಿಸಿದರು. ನೀಲಕಂಠರಾಯಗೌಡ ಪಾಟೀಲ್, ಮಧುಗೌಡ ಜಲಪುರ, ಮೋಹನರೆಡ್ಡಿ ಡಿಗ್ಗಾವಿ, ನರಸಿಂಹ ವಡ್ಡೆ, ಡಿ.ಸಿ.ಪಾಟೀಲ್, ಭೀಮನಗೌಡ ಹೊಸಮನಿ ಇತರರಿದ್ದರು.
- ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿಕೆ
- ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ
ಕೆಂಭಾವಿ: ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಪ್ರಸಕ್ತ ಸಾಲಿನಲ್ಲಿ ಬೇಸಿಗೆ ರಜೆ ತರಗತಿ ನಡೆಸುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬರೆದ ಮನವಿಪತ್ರವನ್ನು ಮಂಗಳವಾರ ಸಿಆರ್ಪಿ ಮೂಲಕ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು, ಈ ವರ್ಷ ಕೇವಲ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಬೇಸಿಗೆ ರಜೆ ತರಗತಿ ತೆಗೆದುಕೊಳ್ಳಲಾಗುವುದು. ಎಲ್ಕೆಜಿಯಿಂದ ಒಂಭತ್ತನೆಯ ತರಗತಿವರೆಗೆ ರಜೆ ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಕೆಲವರ ಆರೋಪ ಹಾಗೂ ಇಲಾಖೆಯ ಕೆಲ ಕಠಿಣ ನಿಯಮ ಪಾಲಿಸಲು ಕಷ್ಟಸಾಧ್ಯ. ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲದ ಕೆಲ ನಿಯಮ ನಮ್ಮ ಕೆಂಭಾವಿ ಪಟ್ಟಣದಲ್ಲಿವೆ. ರಾಜ್ಯದ ಎಲ್ಲ ಕಡೆ ಬೇಸಿಗೆ ರಜೆ ತರಗತಿಗಳನ್ನು ರಾಜಾರೊಷವಾಗಿ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ಕೇವಲ ನಮ್ಮ ಪಟ್ಟಣದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹಲವು ಕಟ್ಟುಪಾಡು ಹಾಕಲಾಗಿದೆ. ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗೂ ಇಲ್ಲದ ನಿಯಮ ನಮಗೇಕೆ ಎಂಬುದು ತಿಳಿಯದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಪ್ರಸಕ್ತ ಸಾಲಿನಲ್ಲಿ ನಾವು ಬೇಸಿಗೆ ರಜೆ ತರಗತಿ ನಡೆಸುತ್ತಿಲ್ಲ. ಖಾಸಗಿ ಶಾಲೆಗಳನ್ನು ಹೊರತುಪಡಿಸಿ ಬೇರೆ ಯಾರಾದರೂ ರಜೆ ತರಗತಿಗಳನ್ನು ನಡೆಸುವಂತಿದ್ದರೆ ಶಿಕ್ಷಣ ಇಲಾಖೆಯ ನಿಯಮಗಳಿಗೆ ಬದ್ಧರಾಗಿ ನಡೆಸಲಿ. ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ರಜಾ ತರಗತಿಗಳನ್ನು ನಡೆಸಿದ್ದೆ ಆದಲ್ಲಿ ಅಂತಹವರ ವಿರುದ್ಧ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕೆಂಭಾವಿ: ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ವಲಯದ ಪ್ರಭಾರಿ ಕಂದಾಯ ನಿರೀಕ್ಷಕ ರಾಜೇಸಾಬ್ ಕಂದಗಲ್ ಹಾಗೂ ಮೂನೀರ ಬೊಮ್ಮನಹಳ್ಳಿ ಮತ್ತು ಗ್ರಾಮ ಆಡಳಿತಾಧಿಕಾರಿ ಬ್ರಹ್ಮದೇವ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೆಂಭಾವಿ ಸಮೀಪದ ಏವೂರ ಸೀಮಾಂತರ ಸರ್ವೇ ನಂ.167/2 ವಿಸ್ತೀರ್ಣ 34 ಎಕರೆ 7 ಗುಂಟೆ ಜಮೀನು ದಲಿತರು ಸಾಗುವಾಳಿ ಮಾಡುತ್ತಿದ್ದು ಈ ಬಗ್ಗೆ ವ್ಯಾಜ್ಯ ಭೂ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವಾಗ ಮತ್ತು ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಸಿ ಆಸ್ತಿ ವರ್ಗಾವಣೆ ಮಾಡಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಅಮಾನತು ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ನೀಲಕಂಠರಾಯಗೌಡ ಪಾಟೀಲ್, ಮಧುಗೌಡ ಜಲಪುರ, ಮೋಹನರೆಡ್ಡಿ ಡಿಗ್ಗಾವಿ, ನರಸಿಂಹ ವಡ್ಡೆ, ಡಿ.ಸಿ.ಪಾಟೀಲ, ಭೀಮನಗೌಡ ಹೊಸಮನಿ, ಎಸ್.ರಾಮು, ಶರಣಗೌಡ, ಬಾಬುಪಟೇಲ ಯಲಗೋಡ, ಎಂ.ಬಿ.ಪಾಟೀಲ್, ಸಂಜು, ಹನೀಫ್, ಮಂಜು ಗಣಾಚಾರಿ ಇತರರಿದ್ದರು.