ಬಸವಕಲ್ಯಾಣ ತಾಲೂಕಿನ ಬಟಗೇರಾ& ಹತ್ತರಗಾ(ಎಸ್)ವರೆಗೆ 3 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಸಿದ್ದು ಬಿರಾದಾರ, ಬಸವರಾಜ ಸ್ವಾಮಿ, ರತಿಕಾಂತ ಕೋಹಿನೂರು, ಮಲ್ಲಿಕಾರ್ಜುನ ಬೆಡ್ಡಜೇವರಗಿ, ಚಂದ್ರಕಾಂತ ಪಾಟೀಲ್, ಶಿವಾನಂದ ಪೂಜಾರಿ, ಸೋಮಶೇಖರ್ ಬಿರಾದಾರ, ದತ್ತು ಜಮಾದಾರ, ಶಿವಕುಮಾರ ಪಾಟೀಲ್ ಇತರರಿದ್ದರು
ಬಸವಕಲ್ಯಾಣ: ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ನಂ.1 ಅಗಬೇಕು ಎನ್ನುವ ಕನಸಿದೆ. ಇದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.
ತಾಲೂಕಿನ ಬಟಗೇರಾ ಗ್ರಾಮದಲ್ಲಿ ಬುಧವಾರ ಸಂಜೆ ಲೋಕೋಪಯೋಗಿ ಇಲಾಖೆ ಅನುದಾನದ 2025&26ನೇ ಸಾಲಿನ ಲೆಕ್ಕ ಶೀರ್ಷಿಕೆ ಕೆಕೆಆರ್ಡಿಬಿ ಯೋಜನೆಯಡಿ ಬಟಗೇರಾ& ಹತ್ತರಗಾ(ಎಸ್)ವರೆಗೆ 3 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಕಾಮಗಾರಿ ಸೇರಿ ಸುಮಾರು 15.25 ಕೋಟಿ ರೂ ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರು ನೆಮ್ಮದಿಯಿಂದ ಬದಕುವ ವಾತಾವರಣ ಅಗಬೇಗಬೇಕಿದೆ ಎಂದರು.
ೇತ್ರದ ಸಮಗ್ರ ಅಭಿವೃದ್ದಿಗೆ ಪ್ರಯತ್ನಿಸುವ ಜತೆಗೆ ಬೆಳಗ್ಗೆ ಹಳ್ಳಿಗಳಿಗೆ ಹೋಗುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇನೆ. ಜನರ ಕಷ್ಟ ಸುಖದಲ್ಲಿ ಭಾಗವಹಿಸುತ್ತಿದ್ದೇನೆ. ೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತರ ಹೊಲಗಳಿಗೆ ಹೋಗಲು ದಾರಿ ಇಲ್ಲ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ರೈತರ ತೊಂದರೆ ಅನುಭವಿಸುತ್ತಿದ್ದಾರೆ. ವಿಧಾನ ಸಭೆಯ ಅಧಿವೇಶನದಲ್ಲಿ ರೈತರ ಪರ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ತಾಲೂಕು ಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಟಕದ ಅಧ್ಯಕ್ಷ ಸಿದ್ದು ಬಿರಾದಾರ, ಪ್ರಮುಖರಾದ ಮೇರಾಜ ನಾಗರಾಳೆ, ರತಿಕಾಂತ ಕೋಹಿನೂರು, ಬಾಲಾಜಿ ಕೆರಾಳೆ ಮಾತನಾಡಿದರು.
ಎಇಇ ರಮೇಶ ಪಾಟೀಲ, ಪ್ರಮುಖರಾದ ಬಸವರಾಜ ಮುಸ್ತಾಪುರೆ, ಗುರುನಾಥ ಮೂಲಗೆ, ರಾಜು ವಾಡೇಕರ್, ರೋಹಿದಾಸ ಬಿರಾದಾರ, ಸೋಮಶೇಖರ ಬಿರಾದಾರ, ಮಲ್ಲಿಕಾರ್ಜುನ ಬೆಡ್ಡಜೇವರಗಿ, ತೇಜರಾವ ಪಾಟೀಲ, ಜೀತೇಂದ್ರ ಜಾಧವ್, ನರೇಂದ್ರ ಪಾಟೀಲ, ಶಿವಾಜಿ ಭುರೆ, ಯಲ್ಲಾಲಿಂಗ ಕೊರಳೆ, ಶೇಷರಾವ ಬಿರಾದಾರ, ಅರ್ಜುನ ಜಾಧವ್, ಪಿಡಿಒ ದತ್ತಾತ್ರೇಯ ಇದ್ದರು. ಬಸವರಾಜ ಸ್ವಾಮಿ ನಿರೂಪಣೆ ಮಾಡಿ ವಂದಿಸಿದರು.
ನೂತನ ಕಟ್ಟಡ ಉದ್ಘಾಟನೆ: ಬೆಟಗೇರಾದಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ 75 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಿರಿಯ ಆರೋಗ್ಯ ಸಹಯಕಿ ಉಪಕೇಂದ್ರದ ಕಟ್ಟಡ ಮತ್ತು 22 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಶರಣು ಉದ್ಘಾಟಿಸಿದರು.
"
ಬಟಗೇರಾ ಭಾಗದಲ್ಲಿ ಸುಮಾರು 21 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂದು ಸುಮಾರು 15.25 ಕೋಟಿ ಅಂದಾಜು ರೂ. ವೆಚ್ಚದ ಕಾಮಗಾರಿಗಳಿಗೆ ಇಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಇನ್ನು ಅಂದಾಜು 6.64 ಕೋಟಿ ರೂ. ಅಂದಾಜು ವೆಚ್ಚದ ಸೇತುವೆ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ
— > ಶರಣು ಸಲಗರ ಶಾಸಕ