ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀರಪ್ಪ ನಿಷ್ಠಿ ಇಂಜನಿಯರಿಂಗ್​ ಕಾಲೇಜು ಮತ್ತು ಕೃಷಿಕಲ್ಪ ಫೌಂಡೇಷನ್​ ನಡುವೆ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕಲಬುರಗಿ ಡಿಸಿ ಮೊಹ್ಮದ್​ ಇಕ್ರಮ್​ ಶರೀಫ್​, ಸಿ.ಎಂ.ಪಾಟೀಲ್​ ಇತರರಿದ್ದರು. 
ರಾಜ್ಯ

ನಿಷ್ಠಿ-ಕೃಷಿಕಲ್ಪ ಫೌಂಡೇಷನ್​ ಒಡಂಬಡಿಕೆ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಉಪಸ್ಥಿತಿಯಲ್ಲಿ ಸಹಿ
ಸುರಪುರ: ಕೃಷಿ ಕ್ಷೇತ್ರದ ಅಭಿವೃದ್ಧಿ, ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿನ ವೀರಪ್ಪ ನಿಷ್ಠಿ ಇಂಜನಿಯರಿಂಗ್​ ಕಾಲೇಜು ಮತ್ತು ಕಲಬುರಗಿಯ ಕೃಷಿಕಲ್ಪ ಫೌಂಡೇಷನ್​ ನಡುವೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹ್ಮದ್​ ಇಕ್ರಮ್​ ಶರೀಫ್​ ಅವರ ಉಪಸ್ಥಿತಿಯಲ್ಲಿ ಈ ಒಡಂಬಡಿಕೆ ನಡೆಯಿತು. ಕೃಷಿಕಲ್ಪ ಫೌಂಡೇಷನ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ.ಪಾಟೀಲ್​ ಅವರ ಸಮ್ಮುಖದಲ್ಲಿ ಸುರಪುರದ ವೀರಪ್ಪ ನಿಷ್ಠಿ ಇಂಜನಿಯರಿಂಗ್​ ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್​.ನಿಷ್ಠಿ ಕಾಲೇಜಿನ ಪರವಾಗಿ ಭಾಗವಹಿಸಿ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಈ ಒಡಂಬಡಿಕೆಯಡಿ ಇಂಜನಿಯರಿಂಗ್​ ತಾಂತ್ರಿಕ ಪರಿಣತಿಯನ್ನು ಕೃಷಿ ಕ್ಷೇತ್ರದೊಂದಿಗೆ ಸಂಯೋಜಿಸಿ ವಿದ್ಯಾರ್ಥಿಗಳಿಗೆ ಕ್ಷೇತ್ರಾಧಾರಿತ ಸಂಶೋಧನೆ, ಪ್ರಾಯೋಗಿಕ ತರಬೇತಿ, ರೈತರೊಂದಿಗೆ ತಾಂತ್ರಿಕ ಸಹಯೋಗ ಹಾಗೂ ಸುಸ್ಥಿರ ಕೃಷಿ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಇದರಿಂದ ಗ್ರಾಮೀಣ ಯುವಕರ ಸಬಲೀಕರಣಕ್ಕೆ ಹಾಗೂ ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ. ಕಾರ್ಯಕ್ರಮದಲ್ಲಿ ಕೃಷಿ ಕಲ್ಪ ಫೌಂಡೇಷನ್​ನ ಪ್ರತಿನಿಧಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ) ಅಧಿಕಾರಿಗಳು, ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ಗಣ್ಯರು ಭಾಗವಹಿಸಿದ್ದರು.