ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ&2026ರಲ್ಲಿ ವಿಜೇತರಾದ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳನ್ನು ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಜಿ.ಎನ್.ಕೃಷ್ಣಮೂರ್ತಿ ಸನ್ಮಾನಿಸಿದರು. ಅಧ್ಯಕ್ಷ ಡಾ.ಪಿ.ಎನ್. ಗಣೇಶ್ ಕುಮಾರ್, ಗೌರವ ಕಾರ್ಯದರ್ಶಿ ಎ.ನಟರಾಜ್, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಷನ್ ಅಧ್ಯಕ್ಷ ಅನಿಲ್ ಕರಿಯ, ಯಲ್ಲಾಪುರ ತಾಲೂಕು ಯೋಗ ಅಸೋಸಿಯೇಷನ್ ಅಧ್ಯಕ್ಷ ಶಂಕರ್ ಭಟ್ ಇದ್ದರು.
ದೊಡ್ಡಬಳ್ಳಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಇತ್ತೀಚೆಗೆ ಕರ್ನಾಟಕ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕಿನ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಎ.ನಟರಾಜ್ ತಿಳಿಸಿದರು.
ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಧಕ ಯೋಗಪಟುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, 8ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಕೆ.ಸಾನ್ವಿ (ಪ್ರಥಮ), ಎಂ.ಎಚ್.ಹನಿಕಾ (ದ್ವೀತಿಯ), ಸಾನ್ವಿತಾ (ನಾಲ್ಕನೇ), ಇ.ನಿಹಾರಿಕಾ (5ನೇ) ಎನ್.ಡಿ.ತ್ರಿಷಿಕಾ (6ನೇ), 8ರಿಂದ 10ವರ್ಷದ ಬಾಲಕರ ವಿಭಾಗದಲ್ಲಿ ಡಿ.ಎಂ.ಆರ್ಯ (ದ್ವೀತಿಯ), ಕೆ.ಎನ್.ಋತ್ವಿಕ್ (ತೃತೀಯ) ಎಚ್.ಯದ್ವಿಕ್ (ನಾಲ್ಕನೇ) ಕುಶ್ವಂತ್ (5ನೇ), ಖ.ಸಿರೀಶ್ ಪುಟ್ಟಣ್ಣ (6ನೇ) ಸ್ಥಾನ ಪಡೆದಿದ್ದಾರೆ. 10ರಿಂದ12 ವರ್ಷದ ಬಾಲಕಿಯರ ವಿಭಾಗದಲ್ಲಿ ಅಪೂರ್ವ (ದ್ವೀತಿಯ), ಎನ್.ಖುಷಿ ಪ್ರಿಯ (ತೃತೀಯ), ಸಾನ್ವಿ ವಿಜಯ್ (ನಾಲ್ಕನೇ), ಎಂ.ಅಖಿಲ (6ನೇ) ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ಎಸ್.ಯಶ್ವಿನ್ (ದ್ವೀತಿಯ), ಬಿ.ಎಸ್.ಭಾರ್ಗವ (4ನೇ) ಸ್ಥಾನ ಪಡೆದಿದ್ದಾರೆ. 12ರಿಂದ 14 ವರ್ಷದ ಬಾಲಕಿಯರ ಭಾಗದಲ್ಲಿ ಎಚ್.ಆರ್.ಗೌತಮಿ (ಪ್ರಥಮ) ಕೆ.ಎಂ.ಹಿತಶ್ರೀ (ದ್ವೀತಿಯ), ಬಾಲಕರ ವಿಭಾಗದಲ್ಲಿ ಜೆ.ಸಿ.ವೇದಿಕ್ ಶೆಟ್ಟಿ (ಪ್ರಥಮ), ಎಸ್.ಕುಶಲ್ (ದ್ವೀತಿಯ), ಎ.ಹಿತೇಶ್ (5ನೇ), ಜಿ.ಆರ್.ನವನೀತ್ (6ನೇ) ಸ್ಥಾನ ಪಡೆದಿದ್ದಾರೆ. 14 ರಿಂದ 16 ವರ್ಷದ ಬಾಲಕರ ವಿಭಾಗದಲ್ಲಿ ಪಿ.ಎಸ್.ಶಶಾಂಕ್ (ಪ್ರಥಮ), ಕೆ.ಎನ್.ವಿಶ್ವನಾಥ್ (ನಾಲ್ಕನೇ) ಸ್ಥಾನ, ಹಾಗೂ 16 ರಿಂದ 18 ವರ್ಷದ ಯುವತಿಯರ ವಿಭಾಗದಲ್ಲಿ ಅರದೇಶಹಳ್ಳಿಯ ಆರ್.ಅರ್ಪಿತಾ (ಪ್ರಥಮ), 18 ರಿಂದ 21 ವರ್ಷದ ಯುವತಿಯವರ ವಿಭಾಗದಲ್ಲಿ ಎಂ.ಆರ್.ಜಾಹ್ನವಿ (ದ್ವೀತಿಯ), 21ರಿಂದ 25 ವರ್ಷದ ವಿಭಾಗದಲ್ಲಿ ಪಿ.ವಿ.ವರ್ಷಿಣಿ (5ನೇ) ಸ್ಥಾನ ಪಡೆದಿದ್ದಾರೆ ಎಂದರು.
ಯೋಗಪಟುಗಳನ್ನು ಬೆಂಗಳೂರು ಗ್ರಾಮಾಂತರ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಅಧ್ಯಕ್ಷ ಎಂ.ಜಿ.ಅಮರನಾಥ್, ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷೆ ಎಂ.ಎ.ಲಕ್ಷಿ$್ಮ ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಕೆ.ಆರ್.ಶಾಮ್ ಸುಂದರ್, ಯೋಗ ಶಿಕ್ಷಕ ಮಂಜುನಾಥ್ ಸನ್ಮಾನಿಸಿದರು.