ಬಿಜೆಪಿ ಮುಖಂಡ ಮುರುಗೇಶ ನಿರಾಣಿ 
ರಾಜ್ಯ

ನಿರಾಣಿ ಅವರ ಎರಡು ಹೊಸ ಉದ್ಯಮಗಳ ಅರ್ಜಿ ತೀರಸ್ಕಾರ

ಸಂತೋಷ ದೇಶಪಾಂಡೆ
ಬಾಗಲಕೋಟೆ: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಹೊರ ರಾಜ್ಯ ಮತ್ತು ವಿದೇಶಿ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಮಾವೇಶ ನಡೆಸುವ ರಾಜ್ಯ ಸರ್ಕಾರ, ಕನ್ನಡಿಗರೊಬ್ಬರು ಉತ್ತರ ಕರ್ನಾಟಕದ ಹಿಂದುಳಿದ ಬಾಗಲಕೋಟೆ ಜಿಲ್ಲೆಯಲ್ಲಿ ೬ ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾದರೂ ಅದಕ್ಕೆ ಸ್ಪಂದಿಸಿದೆ ನಮ್ಮ ಎರಡು ಯೋಜನೆಗಳ ಅರ್ಜಿಗಳನ್ನು ತೀರಸ್ಕಾರ ಮಾಡಿದೆ ಎಂದು ಉದ್ಯಮಿ, ಬಿಜೆಪಿ ಮುಖಂಡ ಮುರುಗೇಶ ನಿರಾಣಿ ತೀವ್ರ ಬೇಸರ ಹೊರಹಾಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಿರಾಣಿ ಗ್ರುಪ್‌ನಿಂದ ೩೪೦೦ ಕೋಟಿ ರೂ. ಬಂಡವಾಳ ಹೂಡಿಕೆಯ ಬಯೋ ಪ್ಲಾಸ್ಟಿಕ್ ಹಾಗೂ ೨೫೦೦ ಕೋಟಿ ರೂ.ಗೂ ಅಽಕ ಹೂಡಿಕೆಯ ಸಸ್ಟೆನೇಬಲ್ ಎವಿಯೇಶನ್ -ÀÇ್ಯಯಲ್ ಘಟಕಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪಿಸುವುದಾಗಿ ಹಿಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಅರ್ಜಿ ಸಲ್ಲಿಸಿದ್ದೇವು. ಆದರೆ, ಸಿದ್ಧರಾಮಯ್ಯ ಅವರು ಸಿಎಂ ಸ್ಥಾನ ಹೋಗುವ ಕೆಲವು ದಿನಗಳ ಮುಂಚೆ ನಮ್ಮ ಅರ್ಜಿಗಳನ್ನು ತೀರಸ್ಕರಿಸುವ ಮೂಲಕ ಕನ್ನಡದ ನೆಲದಲ್ಲಿ ಕನ್ನಡಿಗ ಉದ್ಯಮಿಗೆ ಉದ್ಯೋಗ, ಉದ್ಯಮ ಸ್ಥಾಪನೆ ತಡೆದಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವಾಗ ನಮ್ಮ ಅರ್ಜಿಯನ್ನು ತೀರಸ್ಕರಿಸಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಇದೀಗ ಮಹಾರಾಷ್ಟç, ಆಂಧ್ರಪ್ರದೇಶ ಮತ್ತು ಬಿಹಾರ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಮನವಿ ಮಾಡಿವೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ನನ್ನ ಸ್ವಂತ ಜಿಲ್ಲೆ ಬಾಗಲಕೋಟೆಯಲ್ಲಿ ಎರಡು ಹೊಸ ಉದ್ಯಮ ಆರಂಭಿಸಿ, ಅದರಿಂದ ಸಾವಿರಾರು ಜನ ಪದವೀಧರ ಯುವಕರಿಗೆ ಉದ್ಯೋಗ ಹಾಗೂ ರೈತರಿಗೆ ಆದಾಯ ಹೆಚ್ಚಿಸುವ ಆಶಯ ನನ್ನದಾಗಿದೆ. ಅದರಲ್ಲೂ ರಾಜಕೀಯ ಪುನರ್ ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಯ ಬಗ್ಗೆ ಸಿದ್ಧರಾಮಯ್ಯ ಸಹಾಯ ಮಾಡುವ ಬದಲಿಗೆ ಏಕೆ ಅನ್ಯಾಯ ಮಾಡಿದರು ಎನ್ನುವುದು ತಿಳಿಯುತ್ತಿಲ್ಲ.
ಇಡೀ ಬೆಳಗಾವಿ ವಿಭಾಗದಲ್ಲಿ ನಾನು ಬಾಗಲಕೋಟೆಯಲ್ಲಿ ಆರಂಭಿಸುವ ಒಟ್ಟು ೬ ಸಾವಿರ ಕೋಟಿ ರೂ. ಬಂಡವಾಳದ ಉದ್ಯಮ ಅತ್ಯಂತ ಬೃಹತ್ ಆಗಿದೆ. ಜೊತೆಗೆ ನಾನು ಸರ್ಕಾರದಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ನಮ್ಮದೇ ಜಮೀನು, ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತೇನೆ. ಪರವಾನಿಗೆ ಕೊಟ್ಟು ಸಹಕರಿಸಿದ್ದರೆ ಸಾಕು ಎಂದರೂ ಅದಕ್ಕೂ ಸ್ಪಂದಿಸಲಿಲ್ಲ.
ಈಗ ಮಹಾರಾಷ್ಟç ಸರ್ಕಾರ ಅಗತ್ಯ ಜಮೀನು, ಯೋಜನೆಗೆ ಬೇಕಾದ ಎಲ್ಲ ಕ್ಲೀಯರನ್ಸ್ ಹಾಗೂ ಶೇ. ೫೦ ರಷ್ಟು ಸಬ್ಸಿಡಿ ನೀಡುವುದಾಗಿ ಆವ್ಹಾನ ನೀಡಿದೆ. ಆಂಧ್ರ ಸರ್ಕಾರ ಸಹ ಅದೇ ರೀತಿ ಹೇಳಿದೆ. ಇನ್ನೂ ಬಿಹಾರ ಸರ್ಕಾರ ಎರಡೂ ರಾಜ್ಯಕ್ಕಿಂತ ಶೇ.೧೦ ಹೆಚ್ಚಿನ ಸಬ್ಸಿಡಿ ನೀಡುವುದಾಗಿ ಹೇಳಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಸಿದ್ಧರಾಮಯ್ಯ ಮಾಡಿರುವ ಅನ್ಯಾಯದ -Àಲವೋ ಏನೋ ಎನ್ನುವಂತೆ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ. ಇದೀಗ ಹೊಸ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಬಂದಿದ್ದಾರೆ. ಅವರನ್ನು ಶೀಘ್ರದಲ್ಲೆ ಭೇಟಿ ಮಾಡುವೆ. ನಮ್ಮ ಯೋಜನೆಗಳಿಗೆ ಸ್ಪಂದನೆ ಸಿಕ್ಕರೆ ಸರಿ, ಇಲ್ಲವಾದರೆ ಅನಿವಾರ್ಯವಾಗಿ ನಮಗೆ ಆವ್ಹಾನ ನೀಡಿರುವ ಮೂರು ರಾಜ್ಯಗಳ ಪೈಕಿ ಒಂದು ಕಡೆಗೆ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
=================