ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಆಚರಿಸಲಾಯಿತು. ವೈದ್ಯಾಧಿಕಾರಿ ಡಾ. ರಂಗನಾಥ ವೈದ್ಯ, ಡಾ. ಪರುಶುರಾಮ ವಡ್ಡರ, ಡಾ. ದಿಗಂಬರ ಎಚ್, ಡಾ. ಶಿವಾನಂದ ನಾಡಗೌಡ. ಡಾ.ಹರಿರಾಮಕೃಷ್ಣನ್ ಇತರರಿದ್ದರು.
- ಡಾ. ರಂಗನಾಥ ವೈದ್ಯ ಹೇಳಿಕೆ
- ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ
ಮುದ್ದೇಬಿಹಾಳ: ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥೃ ಕಾಪಾಡಿ, ಸದೃಢರಾಷ್ಟ್ರ ನಿರ್ಮಾಣದಲ್ಲಿ ಶುಶ್ರೂಷಕರ ಕೊಡುಗೆ ಅನನ್ಯವಾಗಿದೆ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಗನಾಥ ವೈದ್ಯ ಹೇಳಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗಿಯ ಜೊತೆ ನಿರಂತರ ಉಪಚಾರ, ಆರೈಕೆ, ಸೇವೆ ಮಾಡುವ ಮೂಲಕ ಶುಶ್ರೂಷಕರ ಆರೋಗ್ಯ ಕ್ಷೇತ್ರದ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯಬೇಕು ಎಂದು ಒತ್ತಾಸೆ ಮಾಡಿದರು.
ಡಾ. ಪರುಶುರಾಮ ವಡ್ಡರ ಮಾತನಾಡಿ, ಶುಶ್ರೂಷಕರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದೆ. ಇಡೀ ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಸ್ಮರಿಸುವ ಉದ್ದೇಶವಾಗಿದೆ. ನೈಟಿಂಗೇಲ್ ಅವರ ಜನ್ಮದಿನ ಇದಾಗಿದ್ದು, ಅವರು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಬುನಾದಿ ಹಾಕಿ ಸಂಘಟನೆ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ನೈಟಿಂಗೇಲ್ ಅವರ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಇಎನ್‌ಟಿ ತಜ್ಞ ಡಾ. ದಿಗಂಬರ ಎಚ್, ಡಾ. ಶಿವಾನಂದ ನಾಡಗೌಡ. ಡಾ.ಹರಿರಾಮಕೃಷ್ಣನ್, ಅಯ್ಯಮ್ಮ ಕೊಣ್ಣೂರ, ಶಿವಣ್ಣ ಮಾಗಿ, ಮಹಮ್ಮದರಫೀಕ ಬಾಗವಾನ, ಯಲಗೂರೇಶ ತೊನಶಾಳ, ಸಾವಿತ್ರಿ ಯಲಗೂರ, ರಾಜಶ್ರೀ ಹೊಕ್ರಾಣಿ. ಹಣಮಗೌಡ ಪಾಟೀಲ, ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.