Newborn baby's body found in toilet 
ರಾಜ್ಯ

ಶೌಚಗೃಹದಲ್ಲಿ ನವಜಾತ ಶಿಶುವಿನ ಶವ ಪತ್ತೆ

ಚಿಂತಾಮಣಿ: ನಗರದ ಎಂ.ಜಿ.ರಸ್ತೆಯ ವಾರ್ಡ್​ ನಂ.17ರ ತಪತೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಆಗ ತಾನೇ ಹುಟ್ಟಿದ ನವಜಾತ ಶಿಶುವಿನ ಶವ ಶೌಚಗೃಹದಲ್ಲಿ ಪತ್ತೆಯಾಗಿದೆ. ಕಾಲನಿಯ ನಿವಾಸಿ ನರಸಿಂಹಪ್ಪ ಅವರ ಮನೆಯ ಶೌಚಗೃಹದಲ್ಲಿ ಶಿಶು ಶವವನ್ನು ಕಂಡ ಅಕ್ಕ&ಪಕ್ಕದ ಮನೆಯವರು ಚಿಂತಾಮಣಿ ನಗರಠಾಣೆಗೆ ವಿಷಯ ತಿಳಿಸಿದ್ದು.

ಪಿಎಸ್​ಐ ಪದ್ಮಾ, ಬೆರಳಚ್ಚು ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ವಿಚಾರಣೆ ನಡೆಸಿದಲ್ಲದೆ ಶಿಶುವಿನ ಕಳೇಬರ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.