ಬೆಳಗಾವಿ ರೈಲು ನಿಲ್ದಾಣ 
ರಾಜ್ಯ

ಬೆಳಗಾವಿಯಿಂದ ಹೊಸ ರೈಲು ಸಂಚಾರ

ಬೆಳಗಾವಿ: ಬೆಂಗಳೂರು-ಬೆಳಗಾವಿ-ಲೋಕಮಾನ್ಯ ತಿಲಕ ಟರ್ಮಿನಲ್ ನಡುವೆ ನೂತನ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಬೆಂಗಳೂರು -ಬೆಳಗಾವಿ- ಲೋಕಮಾನ್ಯ ತಿಲಕ ಟರ್ಮಿನಲ್ (ಸಂಖ್ಯೆ 1653 ಪ್ರತಿ ಶನಿವಾರ, ಮಂಗಳವಾರ), ಲೋಕಮಾನ್ಯ ತಿಲಕ ಟರ್ಮಿನಲ್ -ಬೆಳಗಾವಿ- ಬೆಂಗಳೂರು (ಸಂಖ್ಯೆ 16554 ಪ್ರತಿ ಭಾನುವಾರ ಮತ್ತು ಬುಧವಾರ) ನಗರಗಳ ನಡುವೆ ನೂತನ ಸಾಪ್ತಾಹಿಕ ಎಕ್ಸಪ್ರೆಸ್ ರೈಲುಗಳ ಸಂಚಾರ ಪ್ರಾರಂಭವಾಗಲಿದೆ.
ಮೇ 23ರಂದ ಬೆಂಗಳೂರಿನಿಂದ ಹಾಗೂ ಮೇ 24ರಂದು ಲೋಕಮಾನ್ಯ ತಿಲಕ ಟರ್ಮಿನಲ್ ನಿಲ್ದಾಣದಿಂದ ನಿತ್ಯದ ಸಂಚಾರ ಪ್ರಾರಂಭಿಸಲಿದೆ. ಈ ರೈಲು ಬೆಂಗಳೂರಿನಿಂದ ರಾತ್ರಿ 8.35ಕ್ಕೆ ಹೊರಟು ಮರುದಿನ ಬೆಳಗಾವಿಗೆ ಬೆಳಗ್ಗೆ 6.45ಕ್ಕೆ ಅಗಮಿಸಿ ನಂತರ ಲೋಕಮಾನ್ಯ ತಿಲಕ ಟರ್ಮಿನಲ್ ರೈಲು ನಿಲ್ದಾಣವನ್ನು ರಾತ್ರಿ 8.40ಕ್ಕೆ ತಲುಪಲಿದೆ. ಲೋಕಮಾನ್ಯ ತಿಲಕ ಟರ್ಮಿನಲ್ ನಿಲ್ದಾಣದಿಂದ ಆಯ್ದ ವಾರದಂದು ರಾತ್ರಿ 11.15ಕ್ಕೆ ಬಿಟ್ಟು ಬೆಳಗಾವಿಯನ್ನು ಮರುದಿನ ಬೆಳಗ್ಗೆ 11.50ಕ್ಕೆ ತಲುಪಿ, ಬೆಂಗಳೂರಿಗೆ ರಾತ್ರಿ 10.30ಕ್ಕೆ ತಲುಪಲಿದೆ.