ಕಲಬುರಗಿಯ ಗುರುಕುಲ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಮೋ ಜಾಜಿ, ಎಂ.ಎಸ್​.ಮುಕುಂದ, ರವಿಕುಮಾರ ವಲ್ಲಮಶೆಟ್ಟಿ, ಮಂಗೇಶಕುಮಾರ ಖಡಕೆ, ರಮೇಶ ಕುಲಕರ್ಣಿ, ಸೈಯದ್​ ನದಾಫ್​ ಇತರರಿದ್ದರು 
ರಾಜ್ಯ

ಹೊಸ ತಂತ್ರಜ್ಞಾನ ಅಳವಡಿಕೆ ಅಗತ್ಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಅಮೋ ಜಾಜಿ ಸಲಹೆ
  • ಜಾಜಿ ಗುರುಕುಲ ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಸತ್ಕಾರ
ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಜಗತ್ತಿನಾದ್ಯಾಂತ ವೇಗವಾಗಿ ನಡೆಯುತ್ತಿದ್ದು, ಅದರೊಟ್ಟಿಗೆ ನಾವೂ ವೇಗವಾಗಿ ಬೆಳೆಯಬೇಕು. ಹೊಸ ತಂತ್ರಜ್ಞಾನದ ಅಳವಡಿಕೆ ಅಗತ್ಯ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಜಾಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಮೋ ಜಾಜಿ ಹೇಳಿದರು.
ಜಾಜಿ ಫೌಂಡೇಷನ್​ ಗುರುಕುಲ ಪಿಯು ವಾಣಿಜ್ಯ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಎಂ.ಎಸ್​.ಮುಕುಂದ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಗುರುಕುಲ ಕಾಲೇಜಿನ ಪ್ರಾಂಶುಪಾಲ ರವಿಕುಮಾರ ವಲ್ಲಮಶೆಟ್ಟಿ ಮಾತನಾಡಿದರು.
ಉಪಪ್ರಾಂಶುಪಾಲ ಮಂಗೇಶಕುಮಾರ ಖಡಕೆ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಮೇಶ ಕುಲಕರ್ಣಿ ಇತರರಿದ್ದರು.
ಪ್ರಾಧ್ಯಾಪಕ ಸಯ್ಯದ್​ ನದಾಫ್​ ಸ್ವಾಗತಿಸಿದರು. ರುಬೀನಾ ಅನ್ಸಾರಿ ಅತಿಥಿ ಪರಿಚಯ ಮಾಡಿದರು. ಮಲ್ಲಯ್ಯ ಹಿರೇಮಠ ವಂದಿಸಿದರು. ಸುಷ್ಮಾ ಕುಲಕರ್ಣಿ, ಸಂಗೀತಾ ಕಂತಿ ನಿರೂಪಣೆ ಮಾಡಿದರು.
ಸಾಧಕ ಮಕ್ಕಳಿಗೆ ಗೌರವ
ರಾಜ್ಯಕ್ಕೆ 6ನೇ ಸ್ಥಾನ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪ್ರಿಯಾಂಕ್​ ದೊರೆಗೆ 25,000 ರೂ., 7ನೇ ರ್ಯಾಂಕ್​ ಪಡೆದ ಹೀತಿಕಾ ಗಾಂಧಿಗೆ 20,000 ರೂ., 9ನೇ ರ್ಯಾಂಕ್​ ಪಡೆದ ಶ್ರೇಯಾಂಕ್​ ಕಾಟೇಕರ್​ಗೆ 15,000 ರೂ., 10ನೇ ರ್ಯಾಂಕ್​ ಪಡೆದ ಅಧಿತಿಗೆ 10,000 ರೂ., ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೆ ಪ್ರಥಮ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಧುರ ಮುಡಾಡಗೆ 5000 ರೂ., ಆತಿಶಕುಮಾರ ನರಸಾಲೆಗೆ 3000 ರೂ., ದೇವಶ್ರೀ ರಸಾಳಕರ್​ಗೆ 2000 ರೂ.ನಗದು ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಸಂತೋಷ ಹಿರೇಮಠ ಅವರಿಗೆ ರೋಲಿಂಗ್​ ಟ್ರೋಫಿ ನೀಡಿ ಗೌರವಿಸಲಾಯಿತು.