ಸವದತ್ತಿಯಲ್ಲಿ ಎನ್ಎಚ್ಎಂ ನೌಕರರು ಹೊಸ ನೇಮಕಾತಿ ಪ್ರಕ್ರಿಯೆ ಕೆಬಿಡುವಂತೆ ಆಗ್ರಹಿಸಿ ವಿಶ್ವಾಸ ವೆದ್ಯ ಅವರಿಗೆ ಮನವಿ ಸಲ್ಲಿಸಿದರು. ಉಮೇಶ ಕಾಂಬಳೆ, ಕೃಷ್ಣಾ ಹಣಸಿ ಇತರರಿದ್ದರು.
ಸವದತ್ತಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಕಾರ್ಯನಿರ್ವಹಿಸುತ್ತಿರುವವರನ್ನು ಕೆಲಸದಲ್ಲಿ ಮುಂದುವರಿಸುವಂತೆ ಹಾಗೂ ಹೊಸ ನೇಮಕಾತಿ ಪ್ರಕ್ರಿಯೆ ಕೆಬಿಡುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೆದ್ಯಕಿಯ ಶಿಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂದಿಂದ ಶಾಸಕ ವಿಶ್ವಾಸ ವೆದ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಟಕದ ಅಧ್ಯ ಡಾ.ಆರ್.ಆರ್.ಹಿರೇಕುಂಬಿ ಮಾತನಾಡಿ, ಸರ್ಕಾರದ ಯಾವುದೇ ಸೌಲಭ್ಯ, ಸೇವಾಭದ್ರತೆ ಇಲ್ಲದೆ ಕಡಿಮೆ ವೇತನದಲ್ಲಿ ಸುಮಾರು ವರ್ಷಗಳಿಂದ ದುಡಿಸಿಕೊಳ್ಳುತ್ತಿದ್ದು, ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದೇವೆ. ಸರ್ಕಾರದ ಹೊಸ ನೇಮಕಾತಿ ಪ್ರಕ್ರಿಯೆಯಿಂದ ನೌಕರರ ಬದುಕು ಬೀದಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಶಾಸಕ ವಿಶ್ವಾಸ ವೆದ್ಯ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಹೊಸ ಸಿಬ್ಬಂದಿ ನೇಮಿಸಿಕೊಳ್ಳುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದೆ. ಆದರೆ, ಅಂತಿಮವಲ್ಲ. ಆದ್ದರಿಂದ ನೌಕರರು ಆತಂಕಪಡಬೇಕಿಲ್ಲ. ಸರ್ಕಾರದ ನಿರ್ಧಾರ ಕೆಬಿಡುವಂತೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು. ಉಮೇಶ ಕಾಂಬಳೆ, ವೈದ್ಯರಾದ ಕೃಷ್ಣಾ ಹಣಸಿ, ಶಿವನಗೌಡ ಹಚಡದ, ಶಾರದಾ ಕೋಲ್ಕಾರ, ವಿಜಯಲಕ್ಷಿ$್ಮ ಕೊಳಕಿ, ಗೀತಾ ಸೂಡಿ, ಸುರೇಶ ನಾಯಕ, ಶರಣಗೌಡ ಹಚಡದ, ಶಂಕರ ನಾಯಕ, ಪುಷ್ಪಾ ದೊಡಮನಿ, ದೇವಿಕಾ ಗುಡಿ, ಮಲ್ಲಿಕಾರ್ಜುನ ಶೀಗಿಹಳ್ಳಿ ಇತರರಿದ್ದರು.