ವಿಜಯಪುರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತಂದ ಜೆಎಸ್‌ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಗೆ ಶೈಲಜಾ ಪಾಟೀಲ ಯತ್ನಾಳ ಹಾಗೂ ಅಬೋಲಿ ಪಾಟೀಲ ಯತ್ನಾಳ ಚಾಲನೆ ನೀಡಿದರು. ಡಾ. ರವಿ ಆರ್.ಬಿ (ನಾಯ್ಕ), ಡಾ. ವೀಣಾ ದಿವಟೆರ ಮತ್ತಿತರರಿದ್ದಾರೆ.
- ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ಚಾಲನೆ
- ಸಾಮಾಜಿಕ ಕಾಳಜಿಗೆ ಬದ್ಧ
ವಿಜಯಪುರ: ನಗರ ಹೊರ ವಲಯದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತಂದ ಜೆಎಸ್‌ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಗೆ ಸಿದ್ಧಸಿರಿ ಬಹುರಾಜ್ಯ, ಬಹು ಉದ್ದೇಶ ಸಹಕಾರಿ ಸೊಸೈಟಿ ನಿಯಮಿತ ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ಹಾಗೂ ಅಬೋಲಿ ಪಾಟೀಲ ಯತ್ನಾಳ ಗುರುವಾರ ಚಾಲನೆ ನೀಡಿದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ವೈದ್ಯರುಗಳ ಜತೆಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಅತ್ಯುತ್ತಮ ಆರೈಕೆಗೆ ಹೆಸರು ವಾಸಿಯಾದ ಆಸ್ಪತ್ರೆಯಲ್ಲಿ ಸುರಕ್ಷತೆ ಹೆರಿಗೆ ನಮ್ಮ ಬದ್ಧತೆ ಎಂಬ ಸಾಮಾಜಿಕ ಕಾಳಜಿ ಜತೆಗೆ ಸದ್ಯ ಜಾರಿಗೆ ತಂದಿರುವ ಜೆಎಸ್‌ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಗೆ ಉಚಿತ ಆರೈಕೆ ಮಾಡಲು ಮುಂದಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಇಂತಹ ಯೋಜನೆಗಳು ಸಹಕಾರಿ ಆಗಲಿವೆ ಎಂದು ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ತಿಳಿಸಿದರು.
ಆಸ್ಪತ್ರೆಯ ಸಿಇಒ ಡಾ. ರವಿ ಆರ್.ಬಿ (ನಾಯ್ಕ), ವೈದ್ಯರಾದ ಡಾ. ವೀಣಾ ದಿವಟೆರ, ಡಾ. ಸಂಗಮೇಶ ಮಠಪತಿ, ಡಾ. ಬಲವಂತರಾಯ ಮಸಳಿ, ಡಾ. ಸುನೀಲ್ ಉಕುಮನಾಳ ಮತ್ತಿತರರಿದ್ದರು.