ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ ಭೂಮಿಪೂಜೆ ನೆರವೇರಿಸಿದರು. ಶಾಸಕ ಬಾಬಾಸಾಹೇಬ ಪಾಟೀಲ, ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ, ಪಂಚಾರಿ ಸ್ವಾಮೀಜಿ, ಸುನಿಲ ಹನುಮಣ್ಣವರ ಇತರರಿದ್ದರು.
ಚನ್ನಮ್ಮನ ಕಿತ್ತೂರು: ಜನರ ಬೇಡಿಕೆಯಂತೆ ಪಟ್ಟಣದ ಸಮೀಪ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, 24 ಗಂಟೆಗಳ ಸೇವೆ ನೀಡಲು ಬೇಕಾಗುವ ಎಲ್ಲ ಸೌಲಭ್ಯ ಒದಗಿಸುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಸ್ ನಿಲ್ದಾಣದ ಹತ್ತಿರ ನೂತನ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕು ಆಸ್ಪತ್ರೆ ರ್ನಿಜನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು, ಖುದ್ದಾಗಿ ಆ ಸ್ಥಳಕ್ಕೆ ಭೇಟಿ ನೀಡಿ ಯೋಗ್ಯವಾದ ಸ್ಥಳವಲ್ಲ ಎಂದು ನಾನೇ ಕಾಮಗಾರಿ ನಿಲ್ಲಿಸಿದ್ದೆ. ಇಂದು ಜನರಿಗೆ ಅನುಕೂಲವಾಗುವ ರೀತಿ ಪಟ್ಟಣದ ಸಮೀಪದಲ್ಲಿ ನಿರ್ಮಾಣವಾಗುತ್ತಿದೆ. ಇದು ಶಾಸಕ ಬಾಬಾಸಾಹೇಬ ಪಾಟೀಲ ಅವರ ಹೋರಾಟದ ಪ್ರತಿಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ತಾಲೂಕು ಆಸ್ಪತ್ರೆ ಪಟ್ಟಣದ ಸಮೀಪ ಆಗಬೇಕು ಎಂಬುದು ಎಲ್ಲರ ಬೇಡಿಕೆಯಾಗಿತ್ತು. ಆ ನಿಟ್ಟಿನಲ್ಲಿ ಹೋರಾಟದ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಲಾಗಿತ್ತು. ಇಂದು ಜನಸಾಮಾನ್ಯರಿಗೆ ಸೇವೆ ತಲುಪುವ ರೀತಿ ಪಟ್ಟಣದ ಸಮೀಪ ನಿರ್ಮಾಣ ಮಾಡಲಾಗುತ್ತಿದೆ. ಈ ಮೊದಲು 50 ಹಾಸಿಗೆ ಆಸ್ಪತ್ರೆಗೆ ಇದ್ದ ಅನುಮೋದನೆಯನ್ನು ಹೆಚ್ಚಿಸಿ 33.5 ಕೋಟಿ ರೂ. ಅನುದಾನದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನು ಮಾಡಲಾಗುತ್ತಿದೆ. ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ರಾಜಗುರು ಕಲ್ಮಠದ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯ ಸುನಿಲ ಹನುಮಣ್ಣವರ, ಪಪಂ ಅಧ್ಯ ಜಯಸಿದ್ಧರಾಮ ಮರಿಹಾಳ, ವಿಭಾಗಿಯ ಸಹ ನಿರ್ದೇಶಕರು ಪುಷ್ಪಲತಾ ದೊಡ್ಡಮನಿ, ಎಇಇ ಚಿದಾನಂದ್ ಯಾದಗುಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಈಶ್ವರ್ ಗಡಾದ, ತಾಲೂಕ ಆರೋಗ್ಯ ಅಧಿಕಾರಿ ಸಂಜಯ ಸಿದ್ದನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯ ಸಂಗನಗೌಡ ಪಾಟೀಲ, ಶಂಕರ್ ಹೊಳಿ ಇತರರಿದ್ದರು.