ದೊಡ್ಡಬಳ್ಳಾಪುರದ ನಗರಸಭೆ 2026&27ನೇ ಸಾಲಿನ ಬಜೆಟ್ ಪೂರ್ವಭಾವಿ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ನಗರಸಭೆ ಅಧ್ಯೆ ಸುಮಿತ್ರಾ, ಉಪಾಧ್ಯೆ ಮಲ್ಲೇಶ್, ಪೌರಾಯುಕ್ತ ಕಾರ್ತಿಕೇಶ್ವರ್, ಸದಸ್ಯರಾದ ತ.ನ ಪ್ರಭುದೇವ, ರವಿಕುಮಾರ್, ಶಿವು, ನವೀನ್, ಸುಧಾರಾಣಿ ಲ್ಮನಾರಾಯಣ್ ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ : ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ಬುಧವಾರ ನಗರಸಭೆ 2026&27ನೇ ಸಾಲಿನ ಆಯ&ವ್ಯಯ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಪ್ರತಿ ವರ್ಷವೂ ಕೇವಲ ಹೆಣ್ಣು ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲಾಗುತ್ತದೆ. ಈ ವರ್ಷ ಗಂಡು ನಾಯಿಗಳಿಗೂ ಸಂತಾನಹರಣ ಶಕ್ತಿ ಹರಣ ಚಿಕಿತ್ಸೆ ಮಾಡಬೇಕೆಂದು ನಗರಸಭಾ ಮಾಜಿ ಸದಸ್ಯೆ ಪ್ರಮೀಳಾ ಮಹದೇವ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಕಾರ್ತಿಕೇಶ್ವರ್ ನಿಮ್ಮ ಸಲಹೆ ಸ್ವೀಕರಿಸಿ ಗಂಡುನಾಯಿಗಳಿಗೂ ಆಪರೇಷನ್ ಮಾಡಲಾಗುವುದು ಎಂದರು.
ಪ್ರಮೀಳಾ ಮಹದೇವ್ ಮಾತನಾಡಿ, ಮಹಿಳೆಯರಿಗೆ ಅವಕಾಶ ಸಿಗುವುದೇ ಕಡಿಮೆ, ನಗರಸಭೆಯಲ್ಲಿ ಈ ಬಾರಿ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ಮಹಿಳೆಯರಿಗೆ ಮುಂದೆ ಅವಕಾಶ ಸಿಗುವುದೋ, ಇಲ್ಲವೋ..ಹೀಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಮುನ್ನುಡಿಗೆ ನಾಂದಿಹಾಡಿ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಾಯಿಸಿದರು.
ಪತ್ರಕರ್ತ ಶ್ರೀಕಾಂತ್ ಮಾತನಾಡಿ ಕಳೆದ ಐದು ವರ್ಷಗಳಿಂದಲೂ ಬಜೆಟ್ನಲ್ಲಿ ದೊಡ್ಡಬಳ್ಳಾಪುರ ಹಬ್ಬ, ಸಾಂಸ್ಕ$ತಿಕ ಹಬ್ಬ, ನಗರಸಭೆ ಶತಮಾನೋತ್ಸವ, ನಗರದ ಜೂನಿಯರ್ ಕಾಲೇಜು ಶತಮಾನೋತ್ಸವ ಹಬ್ಬ ಮಾಡುತ್ತೇವೆ ಎಂದು ಹೇಳಲಾಗುತ್ತಿದೆ. ಈವರೆಗೆ ಮಾಡಲೇ ಇಲ್ಲ. ನಗರಸಭೆ ಮುಂಭಾಗ ಕೊಂಗಾಡಿಯಪ್ಪರ ಪ್ರತಿಮೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿದೆ ಶ್ರೀವಾಗಿ ಮುಗಿಸಬೇಕು ಎಂದರು.
ಉಳಿದಂತೆ ನಗರಸಭೆಗೆ ಆದಾಯದ ಮೂಲಗಳು ಬೇಕಾದಷ್ಟು ಇದೆ, ಅದನ್ನು ಹೇಗೆ ಪಡೆದುಕೊಳ್ಳುವುದು ಗೊತ್ತಿಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಕಿರಿದಾದ ರಸ್ತೆಗಳ ಅಗಲೀಕರಣ ಸೇರಿದಂತೆ ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಆಗ್ರಹಿಸಿದರು.
ಜನಪರ ತೀರ್ಮಾನವಿರಲಿ : ದಿ.ಜಾಲಪ್ಪ ಅವರ ಕಾಲದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿಯಾಗಿದ್ದು ಬಿಟ್ಟರೆ ಈವರೆಗೆ ಏನೇನೂ ಅಭಿವೃದ್ಧಿಯಾಗಿಲ್ಲ. ಹಳೆಯ ಮಾರುಕಟ್ಟೆಯನ್ನು ಧ್ವಂಸ ಮಾಡಿ 15 ವರ್ಷ ಕಳೆಯಿತು. ಈವರೆಗೆ ನೂತನ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಜನಪರವಾದ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಡಾ. ಶಿವರಾಜಕುಮಾರ್ ಸಂದ ಮುಖಂಡ ರಮೇಶ್ ಆಗ್ರಹಿಸಿದರು.