ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ 
ರಾಜ್ಯ

ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ ಆರಂಭ-Hospital

ಬೆಂಗಳೂರು: ಭಾರತದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್, ಯಲಹಂಕದಲ್ಲಿ ನೂತನ ಕೇಂದ್ರ ಪ್ರಾರಂಭಿಸಿದೆ. ನೇತ್ರಧಾಮದ ಅಧ್ಯಕ್ಷ ಡಾ. ಶ್ರೀಗಣೇಶ್ ಉದ್ಘಾಟಿಸಿದರು.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉತ್ತರ ಬೆಂಗಳೂರಿನಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಕೇಂದ್ರ ಪೂರೈಸಲಿದೆ. ಕರ್ನಾಟಕದಲ್ಲಿ ನೇತ್ರಧಾಮ ಆಸ್ಪತ್ರೆಯ ಅಸ್ತಿತ್ವವನ್ನು ಬಲಪಡಿಸುವುದಲ್ಲದೆ, ಸುರಕ್ಷತೆ, ವೈದ್ಯಕೀಯ ಶ್ರೇಷ್ಠತೆ ಮತ್ತು ಉತ್ತಮ ನೇತ್ರ ಚಿಕಿತ್ಸಾ ಫಲಿತಾಂಶಗಳ ಮೇಲೆ ಗಮನ ಕೇಂದ್ರೀಕರಿಸಿದ ಆಸ್ಪತ್ರೆಯ ನೈತಿಕ ಮತ್ತು ರೋಗಿ ಸ್ನೇಹಿ ವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಿಇಒ ಡಾ. ಸುಮನ್ ಎಸ್., ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಪ್ರಿಯಾ ಶ್ರೀಗಣೇಶ್ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ.ವಿ. ಪ್ರೀತಿ ಉಪಸ್ಥಿತರಿದ್ದರು.  ಶಾಸಕ  ಎಸ್. ಆರ್. ವಿಶ್ವನಾಥ್ ಆಸ್ಪತ್ರೆಗೆ ಭೇಟಿ ನೀಡಿ ಶುಭ ಹಾರೈಸಿದರು.