ಗೋಕಾಕನಲ್ಲಿ ಹಮ್ಮಿಕೊಂಡಿದ್ದ ಕಣ್ಣು ತಪಾಸಣೆ ಉಚಿತ ಶಿಬಿರವನ್ನು ಜಯಾನಂದ ಮುನವಳ್ಳಿ ಉದ್ಘಾಟಿಸಿದರು. ಪ್ರೊ.ಆರ್.ಎಸ್.ಗುಣಕಿ, ವಿ.ಟಿ.ಹಾಗರಗಿ ಇತರರಿದ್ದರು.
ಗೋಕಾಕ: ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮೂಲಕ ನೇತ್ರದಾನ ಶ್ರೇಷ್ಠ ಕಾರ್ಯವಾಗಿದೆ ಎಂದು ಡಾ.ಸುರೇಂದ್ರ ಪಾಟೀಲ ಹೇಳಿದರು. ನಗರದ ಶ್ರೀ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಕಣ್ಣು ತಪಾಸಣೆ ಉಚಿತ ಶಿಬಿರ ಹಾಗೂ ಕಣ್ಣು, ದೇಹದಾನ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಬಿರದಲ್ಲಿ ಒಟ್ಟು 152 ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು. 50 ಜನರು ಕಣ್ಣು, 12 ಜನರು ದೇಹದಾನ ಮಾಡಲು ನೋಂದಣಿ ಮಾಡಿಸಿದರು. ಕೆಎಲ್ಇ ಸಂಸ್ಥೆ ನಿರ್ದೇಶಕರಾಗಿ ಆಯ್ಕೆಯಾದ ಜಯಾನಂದ ಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಆರ್.ಎಸ್.ಗುಣಕಿ, ವಿ.ಟಿ.ಹಾಗರಗಿ, ಡಾ.ಅಶೋಕ ಮುರಗೋಡ, ಡಾ.ಈಶ್ವರ ಹೆಬ್ಬಳ್ಳಿ, ಶಶಿಕಲಾ ಕೌತನಾಳಿ, ಬಸವರಾಜ ಹಿಂಡಿಹೊಳಿ, ಲಯನ್ಸ್ ಅಧ್ಯ ಎಸ್.ಎಂ.ಹಂಜಿ ಇದ್ದರು.