ಬೀಳಗಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಯಲ್ಲಪ್ಪ ಹೆಗಡೆ ಮಾತನಾಡಿದರು. ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಹಸನಸಾಬ, ಸದಾಶಿವ ಅಗೋಜಿ ಇದ್ದರು.
- ಹೋರಾಟಗಾರ ಯಲ್ಲಪ್ಪ ಹೆಗಡೆ ಆರೋಪ
- ಬಿಡಿಸಿಸಿ ಅಧಿಕಾರಿಗಳ ರಕ್ತ ಸಂಬಂಧಿ ಬ್ಯಾಂಕ್
ಬೀಳಗಿ: ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಮತ್ತು ಮೇಲಾಧಿಕಾರಿಗಳ ಬ್ಯಾಂಕ್ ಆಗಿ ಪರಿರ್ವತನೆಯಾಗಿದೆ. ಪಿಕೆಪಿಎಸ್‌ಗಳ ಮೂಲಕ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಬಿಡಿಸಿಸಿ ಯಲ್ಲಿಯ ಆಡಳಿತ ಮಂಡಳಿಯಲ್ಲಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ನಿರ್ದೇಶಕರಾಗಿರುವುದರಿಂದ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಹೋರಾಟಗಾರ ಯಲ್ಲಪ್ಪ ಹೆಗಡೆ ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ರಕ್ತ ಸಂಬಂಧಿಗಳ ಬ್ಯಾಂಕ್ ಆಗಿದೆ. ಅವ್ಯವಹಾರ ಮುಚ್ಚಿಹಾಕಲು ಸ್ವಜನ ಪಕ್ಷಪಾತ ನಡೆಯುತ್ತಿದೆ. ಜಮಖಂಡಿ ತಾಲೂಕಿನ ದಾದನಟ್ಟಿ ಪಿಕೆಪಿಎಸ್‌ನಲ್ಲಿ ರೂ. 3.42 ಕೋಟಿಗಿಂತ ಹೆಚ್ಚು ಅವ್ಯವಹಾರವಾಗಿ ನಾಲ್ಕು ತಿಂಗಳ ಕಳೆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಗುರಿ ಇದ್ದರೂ ಕೂಡ ರೈತಾಪಿ ಜನರಿಗೆ ಸಾಲ ನೀಡಿಲ್ಲ. ಅದೇ ಅಡಳಿತ ಮಂಡಳಿ ಸಂಬಂಧಿಕರಿಗೆ ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಾರೆ. ರೈತರು ಸಾಲ ಪಡೆಯಲು ಅರ್ಜಿ ಸಲ್ಲಿಸಿದರೂ ಇನ್ನೂವರೆಗೆ ಸಾಲ ಕೊಟ್ಟಿಲ್ಲ ಎಂದು ಹೇಳಿದರು.
ಬಾಗಲಕೋಟೆ ಬಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಸ್.ಎಸ್. ನಿಲಪ್ಪನ್ನವರ ಬೀಳಗಿಯಲ್ಲಿರುವ ಪವನ ಟೇಡರ್ಸ್ ಮೂಲಕ ಸುಮಾರು 8 ಲಕ್ಷ ರೂ. ರ್ನಿಚರ್ ಕೆಲಸಕ್ಕೆ ಅವ್ಯವಹಾರ ಆಗಿದೆ. ಅಲ್ಲದೇ ಇನ್ನೊಬ್ಬರು ಗೋಡೌನ್ ನಿಮಿಸಲು 12 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ.
ಆದರೆ ಅಲ್ಲಿ ಯಾವುದೇ ಗೋಡೌನ್ ನಿರ್ಮಾಣವಾಗಿಲ್ಲ. ಈ ಕುರಿತು ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಯಲ್ಲಪ್ಪ ಹೆಗಡೆ ತಿಳಿಸಿದರು.
ರೈತ ಮುಖಂಡರಾದ ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಹಸನಸಾಬ, ಸದಾಶಿವ ಅಗೋಜಿ, ಲಕ್ಷ್ಮಣ ಕಳೆಪ್ಪನ್ನವರ, ಗಂಗಪ್ಪ ಮೇಟಿ ಮಲ್ಲು ರಾಠೋಡ ಇತರರಿದ್ದರು.