ಬಸವನಬಾಗೇವಾಡಿ ಪಟ್ಟಣದಲ್ಲಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯಿಂದ ಪ್ರಧಾನಮಂತ್ರಿ, ಮುಖ್ಯಮಂತ್ರಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿಗೆ ಸಲ್ಲಿಸಿದರು. ಅಕ್ರಮ ಮಾಶ್ಯಾಳಕರ, ಸುರೇಶ ಜಿ. ಬಿ, ಅನೀಲ ಹೊಸಮನಿ, ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ ಮತ್ತಿತರರಿದ್ದರು. 
ರಾಜ್ಯ

ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷೃ ಸಲ್ಲದು

ಪ್ರಮುಖ ಮುಖ್ಯಾಂಶಗಳು

  • ಅರವಿಂದ ಕುಲಕರ್ಣಿ ಆಕ್ರೋಶ
  • ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ
ಬಸವನಬಾಗೇವಾಡಿ: ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿ 13 ವರ್ಷವಾಯ್ತು ಆದರು ಕೂಡಾ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸಲು ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ ಹೇಳಿದರು.
ಗುರುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಗಮಿಸಿದ ನೂರಾರು ರೈತರು, ಮಹಿಳೆಯರು ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿ ಜಮಾಯಿಸಿದ್ದರು. ನಂತರ ರಾಜ್ಯ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ಮೂಲಕ ಬಸವೇಶ್ವರ ವೃತ್ತದ ಬಸ್ ನಿಲ್ದಾಣದ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ, ಕೆಲಹೊತ್ತು ಪ್ರತಿಭಟನೆ ನಡೆಸಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಮಾತನಾಡಿ ಅವರು, ಬಾಗಲಕೋಟೆ ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಹಕ್ಕು ನಮ್ಮ ನೀರಿನಿಂದ ವಂಚಿತವಾದ ರೈತರು. ನ್ಯಾಯಾಧೀಕರಣದ ತೀರ್ಪಿನಂತೆ ಗೇಟ್ ಅಳವಡಿಸಿ 524.256 ಮೀಟರ್‌ಗೆ ನೀರು ನಿಲ್ಲಿಸಲು ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಈ ಸರ್ಕಾರಗಳು ರೈತ ವಿರೋಧಿ ನೀತಿಯಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರದಲ್ಲಿ ಅಧಿಸೂಚನೆ ಹೊರಡಿಸದಿದ್ದರೆ. ಉತ್ತರ ಕರ್ನಾಟಕದ ರೈತರು ಬೃಹತ್ ಪ್ರಮಾಣದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಭಗವಾನ ರಡ್ಡಿ ಹಾಗೂ ವಿಠ್ಠಲ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 5 ನದಿಗಳು ಹರಿಯುತ್ತಿದ್ದು ಪಂಚ ನದಿಗಳ ಬೀಡು 2ನೇ ಪಂಜಾಬ್ ಎಂದು ಕರೆಯಲಾಗುತ್ತಿದೆ. ಆದರೆ ವಾಸ್ತವಿಕವಾಗಿ ಜಿಲ್ಲೆಯ ಇನ್ನೂ ಕೆಲವೊಂದು ಭಾಗಗಳಲ್ಲಿ ಕುಡಿಯಲು ಕೂಡ ನೀರು ಸಿಗದಂತ ಪರಿಸ್ಥಿತಿ ಇದೆ ಎಂದು ಹೇಳಿದರು.
ಸಮಿತಿಯ ಮಹಿಳಾ ಮುಖಂಡೆ ಲಲಿತಾ ಬಿಜ್ಜರಗಿ ಮಾತನಾಡಿ, ಆಣೆಕಟ್ಟು ನಿರ್ಮಾಣಗೊಂಡು 62 ವರ್ಷ ಗತಿಸಿದರೂ ಅವಳಿ ಜಿಲ್ಲೆಗಳಿಗೆ ಸಮಗ್ರವಾಗಿ ನೀರಾವರಿ ಕಲ್ಪಿಸಲು ವಿಫಲವಾಗಿವೆ. ಎಂದು ಸರ್ಕಾರ ವಿರುದ್ದ ಹರಿಹಾಯ್ದ, 2ನೇ ನ್ಯಾಯಾಧಿಕರಣ ತೀರ್ಪು ನೀಡಿ 13 ವರ್ಷ ಗತಿಸಿದರೂ, ನಮ್ಮ ಪಾಲಿಗೆ ಬಂದ 130. ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ ಇದಕ್ಕೆ ಮೂಲ ಕಾರಣ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಅನವಶ್ಯಕವಾಗಿ ವಿಳಂಬ ಮಾಡುತ್ತಿದೆ. ಇದರಿಂದ ಅವಳಿ ಜಿಲ್ಲೆಯ ರೈತರು ನೀರಿನಿಂದ ವಂಚಿತರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಅಬ್ದುಲ್ ಖಾಧೀರ ಮಾತನಾಡಿ, ನಮ್ಮ ಪಾಲಿಗೆ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಬೇಕು. ರಾಜ್ಯ ಸರ್ಕಾರ 22 ಹಳ್ಳಿಗಳ ಪುನರ್ವಸತಿ ಪುನರ್ನಿರ್ಮಾಣಕ್ಕೆ ಅಗತ್ಯ ಅನುದಾನ ಮೀಸಲಿರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಕ್ರಮ ಮಾಶ್ಯಾಳಕರ, ಸುರೇಶ ಜಿ. ಬಿ, ಅನಿಲ ಹೊಸಮನಿ, ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಡಮನಿ, ಪ್ರಲ್ಹಾದ ನಾಗರಾಳ, ಹೊನಕೇರೆಪ್ಪ ತೆಲಗಿ, ಲಾಲಸಾ ಹಳ್ಳುರ, ಚಂದ್ರಾಮ ತೆಗ್ಗಿ, ಹಣಮಂತರಾಯ ಗುಣಕಿ, ಹಣಮಂತರಾಯ ಹಂದ್ರಾಳ, ರಾಜೇಸಾ ವಾಲೀಕಾರ, ಮಲ್ಲಪ್ಪ ಪಡಸಲಗಿ, ಸಂಗಪ್ಪ ಪಡಸಲಗಿ ನೀಲಾಂಬಿಕೆ ಬಿರಾದಾರ, ಶಿವಪ್ಪ ಸುಂಟ್ಯಾಣ ದಾವಲಸಾ ನಧಾಪ, ಪರಶು ನಾಯಕೋಡಿ, ಸಿದ್ದಪ್ಪ ದೊಡಮನಿ, ಜಲಾಲಸಾಬ ಮುಲ್ಲಾ ಮಲ್ಲನಗೌಡ ನಾಡಗೌಡ, ಚೋಳಪ್ಪ ಜಮಖಂಡಿ, ಪ್ರಕಾಶ ಪಾಟೀಲ, ಶ್ರೀಶೈಲ ಚಿಮ್ಮಲಗಿ, ಬಸಣ್ಣ ಹಾದಿಮನಿ ಮತ್ತಿತರರಿದ್ದರು.
ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿಗೆ ಸಲ್ಲಿಸಿದರು.