Neglect when giving important positions 
ರಾಜ್ಯ

ಪ್ರಮುಖ ಹುದ್ದೆ ನೀಡುವಾಗ ಕಡೆಗಣನೆ

ತುಮಕೂರು ಡೆಸ್ಕ್
ತಿಪಟೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾಗುವುದೇ ಆದರೆ ಛಲವಾದಿ ಸಮುದಾಯದ ಡಾ.ಜಿ.ಪರಮೇಶ್ವರ ಅವರಿಗೆ ನೀಡಲಿ ಎಂದು ದಲಿತ ಮುಖಂಡರು ಒತ್ತಾಯಿಸಿದರು. dalith
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಛಲವಾದಿ, ಡಿಎಸ್​ಎಸ್​, ಇನ್ನಿತರ ದಲಿತಪರ ಸಂಟನೆಗಳ ಮುಖ್ಯಸ್ಥರ ಸಭೆಯ ಸಭೆಯ ಬಳಿಕ ಮಾತನಾಡಿದ ಮುಖಂಡ ಸುರೇಶ್​, ಕಳೆದ 75 ವರ್ಷಗಳಿಂದ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಚಲವಾದಿ ಸಮುದಾಯದ 1.8 ಕೋಟಿ ಇದ್ದು, ಈ ಪೈಕಿ ಅಂದಾಜು ಒಂದು ಕೋಟಿ ಮಂದಿ ಹಿಂದಿನಿಂದಲೂ ಕಾಂಗ್ರೆಸ್​ಗೆ ಮತ ಚಲಾಯಿಸುತ್ತಿದ್ದಾರೆ. ಆದರೂ ಪ್ರಮುಖ ಹುದ್ದೆ ನೀಡುವಾಗ ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಮುದಾಯದ ಮುಖಂಡ ಡಾ.ಜಿ.ಪರಮೇಶ್ವರ 8 ವರ್ಷ ಕೆಪಿಸಿಸಿ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ, ಗೃಹಮಂತ್ರಿಗಳಾಗಿ ಸರಳ ಸ್ವಬಾವದರೆಂದು ಗುರುತಿಕೊಂಡು ಪಕ್ಷಕ್ಕೆ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ. ಈಗ ಕಾಲ ಕೂಡಿ ಬಂದಿದೆ. ಮುಖ್ಮಮಂತ್ರಿ ಬದಲು ಮಾಡುವುದಾದರೆ ಪರಮೇಶ್ವರ ಅವರನ್ನು ಸಿಎಂ ಮಾಡಲೇಬೇಕು ಎಂದರು.
ಮುಖಂಡ ಪ್ರಭುಸ್ವಾಮಿ ಮಾತನಾಡಿ, 1952ರಿಂದ ಇಲ್ಲಿವರೆಗೂ ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಿಲ್ಲ. ದಲಿತ ಪದ ಹೊರಗಿಟ್ಟು ನೋಡಿದರೂ ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲ ರೀತಿಯಲ್ಲೂ ಅರ್ಹರು. ಈ ಬಾರಿ ಸಿಎಂ ಸ್ಥಾನ ಕೊಡದೇ ಹೋದರೆ ಮುಂಬರುವ ಚುನಾವಣೆಗಳಲ್ಲಿ ಛಲವಾದಿ ಸಮುದಾಯ ಅನ್ಯ ಪಕ್ಷಗಳತ್ತ ನೋಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಶಿವಾನಂದಯ್ಯ, ಪ್ರಭುಸ್ವಾಮಿ ಸುರೇಶ್​. ಶಿವಲಿಂಗಮೂರ್ತಿ, ವಸಂತ್​, ಪವನ್​, ಇತರರು ಇದ್ದರು.