ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಎಐಡಿಎಸ್ಒ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರೀತಿ ದೊಡ್ಡಮನಿ, ಸರ್ವೇಶ್ ಮಾವಿನ್, ಸುಜಾತಾ ವೈ ಇತರರಿದ್ದರು.
- ಕಲಬುರಗಿ ಡಿಸಿ ಕಚೇರಿ ಎದುರು ಎಐಡಿಎಸ್ಒ ಕಾರ್ಯಕರ್ತರ ಪ್ರತಿಭಟನೆ
ಕಲಬುರಗಿ: ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಮಗ್ರ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಎಐಡಿಎಸ್ಒ ಕಾರ್ಯಕರ್ತರು ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಂಟನೆ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷ ಗೋವಿಂದ ಯಳವಾರ ಮಾತನಾಡಿ, ವೈದ್ಯಕಿಯ ಸೀಟಿಗಾಗಿ ಹಲವಾರು ವಿದ್ಯಾರ್ಥಿಗಳು ಲಾಂತರ ದುಡ್ಡು ಸುರಿದು ವರ್ಷಗಟ್ಟಲೇ ಹಗಲು&ರಾತ್ರಿ ಕನಸು ಕಟ್ಟಿಕೊಂಡು ನೀಟ್ ಪರೀೆ ತಯಾರಿ ನಡೆಸುತ್ತಾರೆ. ನೀಟ್ ಯು ಜಿ ಪರೀೆ ಪ್ರಶ್ನೆಪತ್ರಿಕೆ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಸೋರಿಕೆ ಆಗಿದೆ. ಇದು ಹಲವಾರು ಬಡ ವಿದ್ಯಾರ್ಥಿಗಳ ಕನಸುಗಳಿಗೆ ಕೊಡಲಿ ಪೆಟ್ಟು ನೀಡಿದೆ. ಎನ್ಟಿಎ ಸಂಸ್ಥೆ ದೊಡ್ಡ ದೊಡ್ಡ ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿದೆ. ದುಡ್ಡಿಗಾಗಿ ಲಾಂತರ ವಿದ್ಯಾರ್ಥಿಗಳ ಕನಸುಗಳಿಗೆ ಮಣ್ಣೆರಚಿದೆ. ಎನ್ಟಿಎ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಮಾತನಾಡಿ, ವೈದ್ಯಕಿಯ ಸೀಟ್ಗೋಸ್ಕರ ಲಾಂತರ ಬಡ ವಿದ್ಯಾರ್ಥಿಗಳು ಕಷ್ಟ ಪಟ್ಟು ತಯಾರಿ ನಡೆಸುತ್ತಾರೆ. ಇಂತಹ ವೈದ್ಯಕಿಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳನ್ನು ಎನ್ಟಿಎ ಸಂಸ್ಥೆ ಅತಿ ಹೆಚ್ಚು ಹಣ ನೀಡುವವರಿಗೆ ಹರಾಜು ಹಾಕಿದೆ. ಕೇವಲ ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣದ ವ್ಯವಸ್ಥೆ ನಾಶಪಡಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸರ್ಕಾರ ಎನ್ಟಿಎ ಸಂಸ್ಥೆ ವಜಾಗೊಳಿಸಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಜಿಲ್ಲಾ ಖಜಾಂಚಿ ಸ್ಫೂರ್ತಿ ಗುರಜಾಲಕರ್, ಜಿಲ್ಲಾ ಸಮಿತಿ ಸದಸ್ಯರಾದ ಯುವರಾಜ ರಾಠೋಡ್ ಇತರರಿದ್ದರು.