Neeraganti dies in a chain-reaction accident. 
ರಾಜ್ಯ

ಸರಣಿ ಅಪಘಾತದಲ್ಲಿ ನೀರಗಂಟಿ ಸಾವು

ಚಿಕ್ಕಬಳ್ಳಾಪುರ: ಚದಲಪುರ ಕ್ರಾಸ್​ ಸಮೀಪದ ರಾಷ್ಟ್ರೀಯಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನೀರಂಗಂಟಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಚದಲಪುರದ ಗಂಗಾಧರಪ್ಪ (56) ಮೃತ. ಅತಿ ವೇಗವಾಗಿ ಬಂದ ಬಸ್​ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗಂಗಾಧರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದಂತೆ ಬಸ್​ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂದಿ ಗಿರಿಧಾಮ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.