ನೀಲಕಂಠೆಗೌಡರ ಆದರ್ಶವೇ ಸ್ಫೂರ್ತಿinspiration
ಮುಳಬಾಗಿಲು: ರಾಜಕೀಯ, ಸಹಕಾರಿ ಕ್ಷೇತ್ರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾಲೂಕಿನ ಮನೆಮಾತಾಗಿದ್ದ ಆವಣಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಿಕಟಪೂರ್ವ ಅಧ್ಯಕ್ಷ ದಿ.ಮೇಲಾಗಾಣಿ ಎಂ.ಸಿ.ನೀಲಕಂಠೆ ಗೌಡರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶಎಲ್ಲರಿಗೂ ಮಾದರಿ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಆರ್.ರಾಜೇಂದ್ರ ಗೌಡ ತಿಳಿಸಿದರು.inspiration
ನಗರದ ತಾಲೂಕು ಸೊಸೈಟಿ ಮುಂಭಾಗದ ಹನುಮಾನ್ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ದಿ.ಎಂ.ಸಿ.ನೀಲಕಂಠೆಗೌಡರ ಪುಣ್ಯಸ್ಮರಣೆಯಲ್ಲಿ ಮಾತನಾಡಿ ಶಿಕ್ಷಣ, ಸಹಕಾರ, ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅವರು, ಬಡವರು ಮತ್ತು ರೈತರ ಪರವಾಗಿ ಕಾರ್ಯನಿರ್ವಹಿಸಿದರು. ಅವರ ಅಕಾಲಿಕ ನಿಧನದಿಂದ ತಾಲೂಕಿಗೆ ಅಪಾರವಾದ ನಷ್ಟ ಉಂಟಾಗಿದೆ ಎಂದು ಸ್ಮರಣಿಸಿದರು.
ಕಾಂಗ್ರೆಸ್ ಮುಖಂಡ ಗುಜ್ಜನಹಳ್ಳಿ ಆರ್.ಮಂಜುನಾಥ್ ಮಾತನಾಡಿ, ನೀಲಕಂಠೆಗೌಡರು ತಾಲೂಕು ರಾಜಕೀಯಕ್ಕೆ ಮಿಂಚಿನ ಸಂಚಾರ ತಂದವರು. ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು. ಇವರ ಅಕಾಲಿಕ ಮರಣ ಕಾಂಗ್ರೆಸ್, ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.