Necklace worth Rs 11.50 lakh stolen 
ರಾಜ್ಯ

11.50 ಲಕ್ಷ ರೂ. ಮೌಲ್ಯದ ನೆಕ್ಲೆಸ್​ ಕಳವು

ಚಿಂತಾಮಣಿ: ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನದಂಗಡಿಯೊಂದರಲ್ಲಿ ಮಹಿಳೆಯೊಬ್ಬರು ವ್ಯಾಪಾರ ಮಾಡುವ ನೆಪಮಾಡಿ 72 ಗ್ರಾಂ ತೂಕದ 11.50 ಲಕ್ಷ ರೂ ಬೆಲೆಯ ಚಿನ್ನದ ನೆಕ್ಲೆಸ್​ ಕಳವು ಮಾಡಿದ್ದಾರೆಂದು ಅಂಗಡಿ ಮಾಲೀಕ ನಾಮಾ ರಾಜೇಶ್​ ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏ.20ರ ಅಕ್ಷಯ ತೃತೀಯಾದಂದು ಹೆಚ್ಚಿನ ಜನ ವ್ಯಾಪಾರ ಮಾಡಿದ್ದರು. ಆಗ ಸ್ಟಾಕ್​ ಚೆಕ್​ ಮಾಡದೇ ಅಂಗಡಿ ಮುಚ್ಚಿದ್ದೆವು. ಏ.22ರಂದು ಅಂಗಡಿ ತೆಗೆದು ವ್ಯಾಪಾರದ ವಹಿವಾಟು ನೋಡಿದಾಗ ನೆಕ್ಲೆಸ್​, ಕಿವಿ ಓಲೆ ಇರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಸುಮಾರು 35 ವರ್ಷದ ಅಪರಿಚಿತ ಮಹಿಳೆಯರಿಬ್ಬರು ವ್ಯಾಪಾರ ಮಾಡುವ ನೆಪದಲ್ಲಿ ಕಳವು ಮಾಡಿ ಪಕ್ಕದಲ್ಲಿದ್ದ ಮತ್ತೊಬ್ಬ ಮಹಿಳೆಯ ಬ್ಯಾಗ್​ನಲ್ಲಿ ಹಾಕಿಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ. ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.