ಕಲಾದಗಿ ಸಮೀಪದ ಸೀಮಿಕೇರಿಯಲ್ಲಿ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಕಲ್ಪಿಸುವ ಕಾಮಗಾರಿಗೆ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಎಂ.ಬಿ.ಸೌದಾಗರ, ಬಸವರಾಜ ಸಂಶಿ, ಪಾಂಡಪ್ಪ ಪೊಲೀಸ್, ಸಂಗಣ್ಣ ಮುಧೋಳ ಇತರರಿದ್ದರು. 
ರಾಜ್ಯ

ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯ ಅನುದಾನ ಮೀಸಲು

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿಕೆ
  • ನೀರಾವರಿ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ
ಕಲಾದಗಿ: ರಾಜ್ಯದಲ್ಲಿರುವ ಪ್ರತಿ ಸಮುದಾಯಕ್ಕೂ ಸರ್ಕಾರದಿಂದ ಅಗತ್ಯ ಅನುದಾನ ಮೀಸಲಿದ್ದು, ಸಮಾಜದ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಅಪಾರ ಕಾಳಜಿ ಇದ್ದು, ಅವರ ಜಮೀನುಗಳಿಗೆ ನೀರು ಒದಗಿಸುವ ಕೆಲಸ ಮಾಡುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.
ಸಮೀಪದ ಸೀಮಿಕೇರಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡ ರೈತರ ಜಮೀನುಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಯೋಜನೆ ಮೂಲಕ ಪರಿಶಿಷ್ಟ ಪಂಗಡದ 30 ಜನ ರೈತರ ಅಂದಾಜು 100 ಹೆಕ್ಟೇರ ಪ್ರದೇಶದ ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತದ ನಂತರ ಮಧ್ಯಾಹ್ನ ಖಜ್ಜಿಡೋಣಿ ಗ್ರಾಮದಲ್ಲಿ 107 ಲಕ್ಷ ರೂ. ವೆಚ್ಚದಲ್ಲಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿ, 10 ಲಕ್ಷ ರೂ.ಗಳ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ, ಖಜ್ಜಿಡೋಣಿಯಿಂದ ಹನಮನೇರಿ ರಸ್ತೆಗೆ ಖಡೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಹಾಗೂ ಅಂಕಲಗಿ ಗ್ರಾಮದಲ್ಲಿ ಪರಿಶಿಷ್ಠ ಜಾತಿ ಕಾಲನಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಕೆಪಿಸಿಸಿ ಉಪಾಧ್ಯಾಕ್ಷ ಎಂ.ಬಿ.ಸೌದಾಗರ, ಕಲಾದಗಿ ಬ್ಲಾಕ್ ಕಾಂಗ್ರೆಸ ಅದ್ಯಕ್ಷ ಬಸವರಾಜ ಸಂಶಿ, ಜಿಪಂ ಮಾಜಿ ಸದಸ್ಯ ಪಾಂಡಪ್ಪ ಪೊಲೀಸ್, ತಾಪಂ ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಪಾಂಡಪ್ಪ ಚನ್ನವ್ವಗೋಳ, ಟಿ.ವಿ.ಪಾಟೀಲ, ರಾಮಪ್ಪ ವಾಸನದ, ಯಲ್ಲಪ್ಪ ತಳವಾರ, ಲಕ್ಷ್ಮಣ ಬಿಲಕೇರಿ, ಗಂಗಪ್ಪ ಮಾದರ, ಸಿದ್ದಪ್ಪ ಹೊರ್ತಿ, ರಾಜು ಸುನಗದ ಸೇರಿ ಇತರರಿದ್ದರು.